ಚಿತ್ರದುರ್ಗ: ನನ್ನ ಮೇಲೆ ದೇವರು ಬಂದಿದ್ದಾನೆ. ನಿಮ್ಮ ಎಂಜಿನಿಯರ್ ಮಗಳನ್ನು ಕೇಳುತ್ತೆ ಎಂದು ಹೇಳಿದ ಡೋಂಗಿ ಬಾಬಾನಿಗೆ ಜನರು ಥಳಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ನಡೆದಿದೆ.ಕಂಚೀಪುರ ಗ್ರಾಮದ ಲೋಕೇಶ್ ಥಳಿತಕ್ಕೊಳಗಾದ ಡೋಂಗಿ ದೇವಮಾನವ. ಅರಸೀಕೆರೆ ನಿವಾಸಿ ಟೀಚರ್ ದಂಪತಿಗೆ ದೇವಮಾನವನಿಂದ ಕಿರುಕುಳದ ಆರೋಪ ಕೇಳಿಬಂದಿದ್ದು, ಸದ್ಯ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನನ್ನ ಮೇಲೆ ಬರುವ ದೇವರು ಎಂಜಿನಿಯರ್ ಹುಡುಗಿಯರನ್ನೇ ಕೇಳುತ್ತೆ. ನೀವು ನಿಮ್ಮ ಮಗಳನ್ನು ಕೊಡಲಿಲ್ಲ ಎಂದರೆ ನಿಮಗೆ ತೊಂದರೆ ಆಗುತ್ತದೆ ಎಂದು ಡೋಂಗಿ ಬಾಬಾ ಡೈಲಾಗ್ ಹೊಡೆದಿದ್ದಾನೆ. ಪೂಜೆ ಮಾಡಿಕೊಡುವ ನೆಪದಲ್ಲಿ ಶಿಕ್ಷಕ ದಂಪತಿಗೆ ತನ್ನ ಮಗಳನ್ನು ಕೊಡುವಂತೆ ದೇವರು ಒತ್ತಾಯ ಮಾಡ್ತಾನೆ ಎಂದು ಹೇಳಿದ್ದಾನೆ.ದೇವಮಾನವ ಎಂದು ಮರ್ಯಾದೆ ಕೊಟ್ಟು ಮನೆ ಒಳಗೆ ಸೇರಿಸಿದ್ದರೆ ಮಗಳನ್ನೇ ಕೇಳಿದ್ದನ್ನು ನೋಡಿದ ಗ್ರಾಮಸ್ಥರು ಆಕ್ರೋಶಗೊಂಡು ಡೋಂಗಿ ಬಾಬಾನನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.Sign in to your account
Username or Email Address


Password

 Remember Me


