ಬೆಂಗಳೂರು: ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರೋ ಘಟನೆ ನಗರದ ಜೆಜೆ ನಗರದಲ್ಲಿ ನಡೆದಿದೆ.ಜೆಜೆ ನಗರ ಠಾಣೆಯ ರಾಜೇಂದ್ರ ಹಲ್ಲೆಗೊಳಗಾದ ಪೊಲೀಸ್ ಪೇದೆ. ರೌಡಿಶೀಟರ್ ಮಹಮ್ಮದ್ ಆಲೀಂ ಮತ್ತು ತಂಡದಿಂದ ಈ ಕೃತ್ಯ ನಡೆದಿದೆ. ಜೆಜೆ ನಗರದಲ್ಲಿ ದುಷ್ಕರ್ಮಿಗಳ ಗುಂಪು ಗಾಂಜಾ ಸೇವಿಸಿ ಪುಂಡಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು.ಕಂಟ್ರೋಲ್ ರೂಂ ಮಾಹಿತಿ ಅಧರಿಸಿ ಹೊಯ್ಸಳ ಬೀಟ್‍ನಲ್ಲಿದ್ದ ಪೇದೆ ರಾಜೇಂದ್ರ ಸ್ಥಳಕ್ಕೆ ಹೋಗಿದ್ರು. ಈ ವೇಳೆ ಪೇದೆ ರಾಜೇಂದ್ರ ಅವರ ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಗಾಯಾಳು ಪೇದೆ ರಾಜೇಂದ್ರ ಅವರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.2016ರಲ್ಲಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮಹಮ್ಮದ್ ಅಲೀಂ ಮತ್ತು ತಂಡ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಆರೋಪಿಗಳು ಪುಂಡರ ಗ್ಯಾಂಗ್ ಕಟ್ಟಿಕೊಂಡು ಅಮಾಯಾಕರ ಮೇಲೆ ಹಲ್ಲೆ ಮಾಡಿ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. Sign in to your account
Username or Email Address


Password

 Remember Me


