ಬೆಂಗಳೂರು: ನಗರದಲ್ಲಿ ಮತ್ತೊಂದು ಸಲಿಂಗ ಕಾಮ ಪ್ರಕರಣ ಬೆಳಕಿಗೆ ಬಂದಿದ್ದು ಮದುವೆ ಮಾಡಿಕೊಳ್ಳಲು ಓಡಿ ಹೋಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರು ನಿವಾಸಿಯಾಗಿರುವ ಗೀತಾ (ಹೆಸರು ಬದಲಾಯಿಸಲಾಗಿದೆ) ಗೆ ಮಹಾರಾಷ್ಟ್ರದ ದೀಪಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದಳು. ಫೇಸ್‍ಬುಕ್ ನಲ್ಲಿ ಪರಿಚಯಗೊಂಡ ಇಬ್ರೂ ಸ್ನೇಹಿತರು ಪ್ರತಿನಿತ್ಯ ಚಾಟ್ ಮಾಡುತ್ತಿದ್ದರು. ಹೀಗೆ ಇಬ್ಬರೂ ಸ್ನೇಹಿತೆಯರ ಸ್ನೇಹ ಸಲಿಂಗ ಕಾಮಕ್ಕೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ.ಇಬ್ಬರೂ ಮದುವೆಯಾಗಲು ನಿರ್ಧರಿಸುತ್ತಿದ್ದಂತೆ ದೀಪಾ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿದ್ದಾಳೆ. ಬೆಂಗಳೂರಿಗೆ ದೀಪಾ ಬಂದಾಗ ಗೀತಾ ತಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ತಿಳಿಸಿದ್ದಾಳೆ. ಮಗಳ ಮಾತು ಕೇಳಿದ ಪೋಷಕರು ಶಾಕ್ ಆಗಿದ್ದಾರೆ. ಕೂಡಲೇ ಮನೆಯವರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮದುವೆಗೆ ವಿರೋಧವಾಗುತ್ತಲೇ ಗೀತಾ ಮತ್ತು ದೀಪಾ ಮಹಾರಾಷ್ಟ್ರಕ್ಕೆ ಓಡಿ ಹೋಗಿದ್ದಾರೆ.ಸದ್ಯ ಗೀತಾ ಮತ್ತು ದೀಪಾ ಇಬ್ಬರೂ ಒಂದೇ ಕಡೆ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಗೀತಾ ಕಾಣೆಯಾದ ಬಳಿಕ ಪೋಷಕರು ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


