ಬೆಂಗಳೂರು: ನಗರದಲ್ಲಿ ಹೊಸವರ್ಷದ ದಿನ ನಡುರಸ್ತೆಯಲ್ಲೆ ಪುಂಡರು ಅಟ್ಟಹಾಸ ಮೆರೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.ರೌಡಿಶೀಟರ್ ಮತ್ತು ಆತನ ತಂಡ ಯುವತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಇಂದಿರಾನಗರದ 6ನೇ ಹಂತದ ಮೋಟಪ್ಪನಪಾಳ್ಯದಲ್ಲಿ ನಡೆದಿದೆ. ಅಂಬರೀಶ್ ಅಲಿಯಾಸ್ ಕಾಖಿ, ಲೋಕೇಶ್ ಅಲಿಯಾಸ್ ಗುಡ್ಡೆ ಮತ್ತು ಗ್ಯಾಂಗ್‍ನಿಂದ ಕೃತ್ಯ ನಡೆದಿದೆ. ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದಲ್ಲದೆ, ಕಾಲಿಗೆ ಬೈಕ್ ಟಚ್ ಆಗಿದ್ದಕ್ಕೆ ಯುವತಿಗೆ ಥಳಿಸಿದ್ದಾರೆ.ಕಿರಾತಕರಿಂದ ಡಾರ್ಜಿಲಿಂಗ್ ಮೂಲದ ಯುವತಿ ಮೇಲೆ ಹಲ್ಲೆ ನಡೆದಿದೆ. ಯುವತಿ ಕ್ಷಮೆ ಕೇಳಿದರೂ ಬಿಡದೇ ಬೈಕ್ ಮುಚ್ಚಿಟ್ಟು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಗೂಂಡಾಗಳಿಗೆ ಹೆದರಿದ ಸ್ಥಳೀಯರು ದೂರನ್ನೂ ಕೊಡದೆ ಸುಮ್ಮನಾಗಿದ್ದಾರೆ.ನಡೆದಿದ್ದೇನು?: ಮಧ್ಯರಾತ್ರಿ 12.21ಕ್ಕೆ ಅವರ ಪಾಡಿಗೆ ಅವರು ನಡೆದುಕೊಂಡು ಹೋಗ್ತಿರುವವರನ್ನೂ ಬಿಡದೆ ಯುವಕರ ತಂಡ ಚುಡಾಯಿಸಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾರೆ. ನಡುರಸ್ತೆಯಲ್ಲೇ ಹೀನಾಮಾನವಾಗಿ ನೃತ್ಯ ಮಾಡಿ ತೊಂದರೆ ನೀಡಿದ್ದಾರೆ. ಮಧ್ಯರಾತ್ರಿ 12.25ಕ್ಕೆ ಕಾರು, ವಾಹನ ಸವಾರರನ್ನು ತಡೆದು ವಿಶ್ ಮಾಡುತ್ತೇವೆ ಎಂದು ಹೆಲ್ಮೆಟ್ ಕಸಿದು ಕಿರಿಕಿರಿ ಮಾಡಿದ್ದಾರೆ.ಮಧ್ಯರಾತ್ರಿ 12.26ಕ್ಕೆ ಬೈಕ್ ಟಚ್ ಆಯ್ತು ಎಂಬ ಕಾರಣಕ್ಕೆ ಬೈಕ್‍ನಲ್ಲಿದ್ದ ಸವಾರ, ಯುವತಿ ಮೇಲೆ ಏಕಾಏಕಿ ದಾಳಿ ಮಾಡಿ ಥಳಿಸಿದ್ದಾರೆ. ಮಧ್ಯರಾತ್ರಿ 12.27ಕ್ಕೆ ಹಲ್ಲೆ ಬಳಿಕ ಸವಾರ, ಯುವತಿ ಸ್ಥಳದಿಂದ ಹೋಗಿದ್ದಾರೆ. ಬಳಿಕ ಪುಂಡರು ಅವರ ಬೈಕ್ ಮುಚ್ಚಿಟ್ಟಿದ್ದಾರೆ.ಸ್ಥಳೀಯರಿಗೆ, ಸಾರ್ವಜನಿಕರಿಗೆ ಕಿರಿಕಿರಿ ಮಾಡಿರೋ ಕಿಡಿಗೇಡಿಗಳು ಕೈಯಲ್ಲಿ ಪಟಾಕಿ ಹಿಡಿದು ನಡುರಾತ್ರಿ ದಾಂಧಲೆ ಮಾಡಿದ್ದಾರೆ. ಬೈಕ್‍ನಲ್ಲಿ ಹೋಗ್ತಿದ್ದ ಯುವಕ, ಯುವತಿಗೆ ರಸ್ತೆಯಲ್ಲಿ ಹಾವಳಿ ಮಾಡಿದ್ದು, ಬಿಯರ್ ಬಾಟೆಲ್ ಹಿಡಿದು ಆಟಾಟೋಪ ಮೆರೆದಿದ್ದಾರೆ. ಯುವತಿ ಕ್ಷಮಾಪಣೆ ಕೇಳಿದರೂ ಬಿಡದೆ ಅಟ್ಟಹಾಸ ಮೆರೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.https://www.youtube.com/watch?v=cq7XsNaPYCASign in to your account
Username or Email Address


Password

 Remember Me


