ಶಿವಮೊಗ್ಗ: ಇಲ್ಲಿನ ಆಯನೂರು ರಸ್ತೆ ಯಮಸ್ವರೂಪಿಯಾಗಿದ್ದು, ಮತ್ತೆರೆಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.ಈ ರಸ್ತೆಯ ವೀರಣ್ಣನ ಬೆನವಳ್ಳಿ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಮಿತ್ ಹಾಗೂ ಜಾನ್ಸನ್ ಬೈಕಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಜಾನ್ಸನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಮೀತ್‍ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮಾರ್ಗದಲ್ಲಿ ಅಪಘಾತ, ಸಾವು- ನೋವುಗಳು ಹೆಚ್ಚಾಗಿದ್ದು, ಅಪಘಾತ ವಲಯ ಎಂದು ಘೋಷಿಸಲು ಈ ಭಾಗದ ಜನತೆ ಆಗ್ರಹಿಸಿದ್ದಾರೆ.ಕುಂಸಿ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


