ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಲ್ಲಿ ಇನ್ನೋವಾ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.ಭಾನುವಾರ ಬೆಳಗ್ಗೆ 10.30 ರ ವೇಳೆಗೆ ಬೈಕಿನಲ್ಲಿ ಮೂವರು ಸವಾರರು ನಿಟ್ಟೂರಿನ ಬಾಳಿಗಾ ಫಿಶ್‍ನೆಟ್ ಎದುರಿನಿಂದ ಕೊಡಂಕೂರು ಕಡೆಗೆ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಇನ್ನೋವಾ ಕಾರು ಬೈಕ್‍ ಗೆ ಡಿಕ್ಕಿ ಹೊಡೆದಿದೆ. ವೇಗದ ರಭಸಕ್ಕೆ ಬೈಕ್‍ ನಲ್ಲಿದ್ದ ಮೂವರು ಏಕಾಏಕಿ ಎಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರು ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದು, ಬೈಕ್‍ಗೆ ಡಿಕ್ಕಿಯಾದ ನಂತರ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಬೈಕ್ ನಲ್ಲಿದ್ದವರು ಕೊಡಂಕೂರು ನಿವಾಸಿಗಳಾಗಿದ್ದು ದೀಪಕ್, ಬಾಲು, ಅವಿನಾಶ್ ಎಂದು ಗುರುತಿಸಲಾಗಿದೆ.ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


