ತುಮಕೂರು: ಕೆಲವು ದಿನಗಳ ಹಿಂದೆ ಸಚಿವ ತನ್ವೀರ್ ಸೇಠ್‍ಗೆ 10 ಕೋಟಿ ರೂ. ನೀಡುವಂತೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದ. ಇದೀಗ ತುಮಕೂರಿನ ಚಿಕ್ಕನಾಯಕಹಳ್ಳಿ ಶಾಸಕ ಸುರೇಶ್ ಬಾಬುಗೆ ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.ಕೂಡಲೇ 10 ಕೋಟಿ ರೂ. ಕೊಡಬೇಕು. ಇಲ್ಲದಿದ್ರೆ ನಿನ್ನ ಪ್ರಾಣಕ್ಕೆ ಅಪಾಯ ಅಂತಾ ಜೀವ ಬೆದರಿಕೆ ಹಾಕಿದ್ದಾನೆ. ಸುರೇಶ್ ಬಾಬು ಜೊತೆ ಹಿಂದಿಯಲ್ಲಿ ಮಾತನಾಡಿರುವ ರವಿಪೂಜಾರಿ, ಕರೆ ಬಳಿಕ ಮೆಸೇಜ್ ಕೂಡ ಮಾಡಿ ಬೆದರಿಕೆ ಹಾಕಿದ್ದಾನೆ. ಶಾಸಕರು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿತ್ತು. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಚಿವ ಸೇಠ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದರು. ಇದನ್ನೂ ಓದಿ: ತೀರ್ಥಹಳ್ಳಿಯ ಚಿನ್ನ-ಬೆಳ್ಳಿ ವರ್ತಕನಿಗೆ ರವಿ ಪೂಜಾರಿ ಬೆದರಿಕೆ- ಅಬ್ಬಾ ಇಷ್ಟು ಹಣಕ್ಕೆ ಬೇಡಿಕೆ!https://www.youtube.com/watch?v=CVoLaIKwhk0Sign in to your account
Username or Email Address


Password

 Remember Me


