ಚಿಕ್ಕಮಗಳೂರು: ಪೊಲೀಸ್ ಪೇದೆ ವೃದ್ಧರೊಬ್ಬರನ್ನು ದರದರನೆ ಎಳೆದು ದೇಗುಲದ ಬಳಿ ಬಿಸಾಡಿ ಖಾಕಿ ದರ್ಪ ತೋರಿರುವ ಅಮಾನವೀಯ ಘಟನೆ ಶೃಂಗೇರಿಯಲ್ಲಿ ನಡೆದಿದೆ.ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್. ಡಿ ದೇವೇಗೌಡ ಅವರ ಕುಟುಂಬ ಪೂರ್ಣಯಾಗ ಕಾರ್ಯಕ್ರಮ ಹಾಗೂ ಸಂಕ್ರಾಂತಿ ಹಿನ್ನಲೆ ಭಾನುವಾರ ಶಾರದಾ ಪೀಠ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವೃದ್ಧರೊಬ್ಬರು ದೇವಾಲಯಕ್ಕೆ ಆಗಮಿಸಿದ್ದಾರೆ. ಆದರೆ ಜನರು ಹೆಚ್ಚಾಗಿದ್ದ ಹಿನ್ನೆಲೆ ಮಹಾದ್ವಾರದ ಬಳಿ ಕುಳಿತು ಕೊಂಡಿದ್ದಾರೆ. ಆದರೆ ಅಲ್ಲಿಗೆ ಬಂದ ಪೊಲೀಸ್ ಪೇದೆ ವೃದ್ಧರನ್ನು ಎಳೆದು ಮಹಾದ್ವಾರದಿಂದ ಹೊರಗೆ ಬೀಸಾಡಿದ್ದಾರೆ.ವೃದ್ಧರನ್ನು ಎಳೆದು ಕೊಂಡು ಹೋಗುತ್ತಿರುವ ಪೊಲೀಸ್ ಪೇದೆಯ ದರ್ಪ ಕೃತ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.ಈ ವೇಳೆ ಪೊಲೀಸ್ ಪೇದೆ ವರ್ತನೆ ಕಂಡು ವೃದ್ಧರು ಕಂಗಾಲಾಗಿದ್ದಾರೆ. ನೂರಾರು ಜನರು ಸ್ಥಳದಲ್ಲೇ ಇದ್ದರು ಯಾರು ಪೇದೆಯ ವರ್ತನೆಯನ್ನು ತಡೆಯಲು ಯತ್ನಿಸಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸ್ ಪೇದೆಯ ವರ್ತನೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.https://www.youtube.com/watch?v=rbzFV1X9PZQSign in to your account
Username or Email Address


Password

 Remember Me


