ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆದ ಅದ್ಧೂರಿ ಕನಕೋತ್ಸವಕ್ಕೆ ರಾತ್ರಿ ತೆರೆ ಬಿದ್ದಿದೆ. ರಾತ್ರಿ ಕನಕೋತ್ಸವದ ಮುಕ್ತಾಯ ಸಮಾರಂಭಕ್ಕೆ ಆಗಮಿಸಿದ್ದ ಸ್ಯಾಂಡಲ್‍ವುಡ್‍ನ ಚಿತ್ರತಾರೆಯರ ದಂಡು ಮೆರಗು ತಂದಿತ್ತು.ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರವರ ಮೂಸಿಕಲ್ ನೈಟ್ಸ್ ನಗರದ ಪುರಸಭೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರನ್ನು ಹುಚ್ಚೆಬ್ಬಿಸಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನಕೋತ್ಸವಕ್ಕೆ ಆಗಮಿಸಿ ಹುಚ್ಚ ಚಿತ್ರದ ಉಸಿರೇ… ಉಸಿರೇ… ಹಾಡು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು. ಇದೇ ವೇಳೆ ಕನಕಪುರ ನಿವಾಸಿ ಪ್ರಖ್ಯಾತ್ ಅಭಿನಯದ ನಡುವೆ ಅಂತರವಿರಲಿ ಚಿತ್ರದ ಟ್ರೇಲರನ್ನು ನಟ ಸುದೀಪ್ ಬಿಡುಗಡೆ ಮಾಡಿದ್ರು. ಅಲ್ಲದೇ ಕೆಲ ಸಮಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ್ರು.ಇದಲ್ಲದೇ ನಟಿ ಮಾನ್ವಿತಾ, ಶಾನ್ವಿ, ರಂಜಿತಾ ಇನ್ನೂ ಅನೇಕ ಚಿತ್ರ ತಾರೆಯರು ಕನಕೋತ್ಸವದಲ್ಲಿ ಪಾಲ್ಗೊಂಡಿದ್ರು. ಅಲ್ಲದೇ ಪ್ರತಿ ತಾರೆಯರು ಸಹ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು. ಇದೇ ವೇಳೆ ಮಾತನಾಡಿದ ನಟ ಸುದೀಪ್ ಡಿಕೆ ಬ್ರದರ್ಸ್‍ರವರು ನಡೆಸುತ್ತಿರುವ ಕನಕೋತ್ಸವ ಕಾರ್ಯಕ್ರಮವನ್ನ ಶ್ಲಾಘಿಸಿದ್ರು.ಸುದೀಪ್‍ರನ್ನು ಇದೇ ವೇಳೆ ಸನ್ಮಾನಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಸುದೀಪ್ ರಾಜ್ಯಕ್ಕೆ ದೊಡ್ಡ ಆಸ್ತಿ. ಅವರ ಕೀರ್ತಿ ಇದೀಗ ವಿಶ್ವದೆತ್ತರಕ್ಕೆ ಪಸರಿಸ್ತಾ ಇರುವುದಕ್ಕೆ ಅಭಿನಂದಿಸಿದ್ರು.Sign in to your account
Username or Email Address


Password

 Remember Me


