ಮೈಸೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.ವರದಮ್ಮ(35) ಹಾಗೂ ಮಹದೇವಸ್ವಾಮಿ(31) ಮೃತ ಪ್ರೇಮಿಗಳು. ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ವರದಮ್ಮ ತಮ್ಮ ಪತಿ ಹಾಗೂ ಮಹದೇವಸ್ವಾಮಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದರು. ಎರಡು ವರ್ಷದಿಂದ ಬೇರೊಂದು ಮನೆ ಮಾಡಿ ಸಂಸಾರ ನಡೆಸುತ್ತಿದ್ದರು. ಆದ್ರೆ ಭಾನುವಾರ ಬೆಳಗ್ಗೆ ವರದಮ್ಮ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಮಹದೇವಸ್ವಾಮಿ ಕೂಡ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಬ್ಬರ ಮೃತದೇಹವನ್ನು ನಿನ್ನೆಯೇ ಹೆಚ್‍ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಹೆಚ್‍ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


