ಚಿಕ್ಕಬಳ್ಳಾಪುರ: ಸೇಬು ತಿಂದ ಬಾಲಕ ಸಾವನ್ನಪ್ಪಿದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಬಡಾವಣೆಯಲ್ಲಿ ನಡೆದಿದೆ.6ನೇ ತರಗತಿ ವಿದ್ಯಾರ್ಥಿ ಆಸೀಫ್ (11) ಮೃತ ಬಾಲಕ. ಬಾಲಕ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ತಿನ್ನಲ್ಲು ಸೇಬು ಕೊಟ್ಟಿದ್ದರು. ಸೇಬು ತಿಂದ ಕೆಲ ಹೊತ್ತಿನಲ್ಲೇ ಆಸೀಫ್ ಗೆ ಉಸಿರಾಟದ ಸಮಸ್ಯೆ ಕಾಡುತ್ತಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಆಸೀಫ್ ಸಾವನ್ನಪ್ಪಿದ್ದಾನೆ.ಮರಣೋತ್ತರ ಪರೀಕ್ಷೆ ಬಳಿಕ ಮೃತ ಆಸೀಫ್ ನ ಸಾವಿನ ಕಾರಣ ಬಯಲಾಗಿದೆ. ಗಂಟಲಿನಲ್ಲಿ ಸೇಬು ಸಿಲುಕಿಕೊಂಡು ಆಸೀಫ್ ಸಾವು ಎಂದು ಧೃಢಪಡಿಸಿದ್ದಾರೆ. ಅನ್ನನಾಳದ ಬದಲು ಉಸಿರಾಟದ ನಾಳಕ್ಕೆ ಸೇಬು ಸೇರಿದ್ದರಿಂದ ಆಸೀಫ್ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ.ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. Sign in to your account
Username or Email Address


Password

 Remember Me


