ಕಲಬುರಗಿ: ದುಷ್ಕರ್ಮಿಗಳು ನಗರದ ವಿವಿಧೆಡೆ ಕಾರುಗಳಿಗೆ ಬೆಂಕಿ ಹಾಕುತ್ತಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.ದುಷ್ಕರ್ಮಿಗಳು ಸೇಡಂ ರಸ್ತೆಯ ಜಯನಗರದಲ್ಲಿ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯಲ್ಲಿ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.ಒಂದೇ ಕಿಡಿಗೇಡಿಗಳ ಗುಂಪಿನಿಂದ ಎಲ್ಲೆಡೆ ಏಕಕಾಲಕ್ಕೆ ಬೆಂಕಿ ಹಚ್ಚಿರುವ ಸಾಧ್ಯತೆಯಿದ್ದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಲಬುರಗಿ ನಗರ ಜನರು ಬೆಚ್ಚಿಬಿದಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


