ಬೆಂಗಳೂರು: ಲವರ್ ಜೊತೆ ವಿಲಾಸಿಮಯ ಜೀವನ ನಡೆಸಬೇಕೆಂದು ಲ್ಯಾಪ್‍ಟಾಪ್ ಕಳ್ಳತನ ಮಾಡುತ್ತಿದ್ದ ಯುವತಿಯನ್ನು ನಗರದ ಮೈಕೋಲೇಔಟ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.23 ವರ್ಷದ ಶೋಭಾ ಬಂಧಿತ ಆರೋಪಿ. ಪಿಜಿಯಲ್ಲಿ ರೂಮ್ ಬೇಕೆಂದು ಕೇಳಿಕೊಂಡು ಬರುತ್ತಿದ್ದ ಶೋಭಾ, ಬಳಿಕ ಅಲ್ಲಿಯ ಲ್ಯಾಪ್‍ಟಾಪ್ ಕಳ್ಳತನ ಮಾಡುತ್ತಿದ್ದಳು. ಪಿಜಿ ಬಾಡಿಗೆಗಾಗಿ ಬಂದಿರುವಂತೆ ನಟಿಸಿ, ಮಾಲೀಕರನ್ನು ನಂಬಿಸಿ ರೂಮ್ ಪಡೆದುಕೊಳ್ಳುತ್ತಿದ್ದಳು. ರೂಮ್‍ನಲ್ಲಿ ರೆಸ್ಟ್ ಮಾಡುವುದಾಗಿ ತೆರಳಿ ಅಲ್ಲಿರುವ ಲ್ಯಾಪ್ ಟಾಪ್‍ಗಳನ್ನು ಕದ್ದು, ಇಂಟರ್ ವ್ಯೂವ್ ಇದೆ ಸಂಜೆ ಬಂದು ಮುಂಗಡ ಹಣ ಮತ್ತು ದಾಖಲಾತಿಗಳನ್ನು ನೀಡುತ್ತೇನೆ ಅಂತಾ ಹೇಳಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು.ಲೇಡಿಸ್ ಪಿಜಿಯಲ್ಲಿ ಲ್ಯಾಪ್ ಟಾಪ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ನಗರದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ನಗರದ ಮೈಕೋಲೇಔಟ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಶೋಭಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸದ್ಯ ಆರೋಪಿ ಶೋಭಾಳಿಂದ ನಾಲ್ಕು ಲಕ್ಷ ಮೌಲ್ಯದ 10 ಲ್ಯಾಪ್ ಟಾಪ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


