– ರಾಯರ ದರ್ಶನಕ್ಕೆ ರಾತ್ರಿ 8:30ರ ವರೆಗೂ ಅವಕಾಶರಾಯಚೂರು: ರಾಹುಗ್ರಸ್ತ ಚಂದ್ರಗ್ರಹಣ (Lunar Eclipse) ಹಿನ್ನೆಲೆ ಮಂತ್ರಾಲಯದ (Mantralayam) ರಾಯರ (Guru Raghavendra Swamy) ವೃಂದಾವನಕ್ಕೆ ಗ್ರಹಣದ ಆರಂಭದಿಂದ ಮುಕ್ತಾಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ. ಅಲ್ಲದೇ ಶಾಂತಿ ಹೋಮ ಕೂಡ ನಡೆಯಲಿದೆ.ಗ್ರಹಣ ಇರುವುದರಿಂದ ಭಕ್ತರ ಸೇವೆಗೆ ಒಂದಷ್ಟು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ರಾತ್ರಿವರೆಗೂ ಅವಕಾಶ ಇರಲಿದೆ. ಸಂಜೆ 4 ಗಂಟೆಯ ಬಳಿಕ ಪೂಜೆ ಹಾಗೂ ಸೇವೆಗಳನ್ನ ಬಂದ್ ಮಾಡಲಾಗುತ್ತಿದೆ. ಇದನ್ನೂ ಓದಿ: ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರರಾತ್ರಿ ವೇಳೆ ನಡೆಯುತ್ತಿದ್ದ ಉತ್ಸವಗಳು, ಹರಕೆ ಸೇವೆಗಳನ್ನು ಮಧ್ಯಾಹ್ನವೇ ನೆರವೇರಿಸಲಾಗುತ್ತಿದೆ. ಚಿನ್ನದ ರಥ, ಬೆಳ್ಳಿ ರಥ, ಗಜ ವಾಹನೊತ್ಸವಗಳನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳಿಸಲಾಗುತ್ತಿದೆ. ಉಳಿದಂತೆ ಭಕ್ತರಿಗೆ ರಾತ್ರಿ 8:30ರ ವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆ ಬಳಿಕ ತೀರ್ಥ ಪ್ರಸಾದ ಸೇವೆ ಇರುವುದಿಲ್ಲ. ಇನ್ನೂ ಗ್ರಹಣ ಕಾಲದಲ್ಲಿ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ. ಶಾಂತಿ ಹೋಮದಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


