ಕಾರವಾರ: ಕ್ರೂಸರ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 10 ಮಂದಿಗೆ ಗಾಯಗಳಾದ ಘಟನೆ ಕಾರವಾರ ತಾಲೂಕಿನ ಚಂಡ್ಯಾ ಗ್ರಾಮದ ಬಳಿ ನಡೆದಿದೆ.ಮೃತ ದುರ್ದೈವಿಯನ್ನು ನಿಂಗಪ್ಪ ಹನುಮಂತಪ್ಪ (52)ಎಂದು ಗುರುತಿಸಲಾಗಿದೆ. ಕುಷ್ಟಗಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಾಹನ ಅತೀ ವೇಗದಲ್ಲಿ ಸಂಚರಿಸುತ್ತಿದ್ದು ನಿದ್ದೆ ಮಂಪರಿನಲ್ಲಿದ್ದರಿಂದ ಕ್ರೂಸರ್, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಕಾರವಾರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


