ಕೋಲಾರ: ತೆಲುಗು-ತಮಿಳು ಪ್ರಭಾವ ಹೆಚ್ಚಾಗಿರೋ ಕೋಲಾರದ ಬಂಗಾರಪೇಟೆಯಲ್ಲಿ ಬರೀ ನವೆಂಬರ್ ಅಲ್ಲ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ನಡೆಯುತ್ತೆ. ಇದಕ್ಕೆ ಕಾರಣ ಇಂದಿನ ನಮ್ಮ ಪಬ್ಲಿಕ್ ಹೀರೋ ಸುಬ್ರಮಣಿ.ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ನಿವಾಸಿಯಾಗಿರೋ ಡಾ.ಎಂ. ಸುಬ್ರಮಣಿ ಕನ್ನಡಾಭಿಮಾನಿ. ಇವರು ತೆಲುಗು, ತಮಿಳು ಭಾಷೆಯ ಪ್ರಭಾವಕ್ಕೊಳಗಾದ ಪಟ್ಟಣದಲ್ಲಿ ವರ್ಷಪೂರ್ತಿ ಕನ್ನಡ ಹಬ್ಬ ಆಚರಿಸುತ್ತಾರೆ.ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಎಂ.ಸುಬ್ರಮಣಿ ಅವರು 2009ರಿಂದ ನಿರಂತವಾಗಿ ಕನ್ನಡ ಸೇವೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ತಿಂಗಳು ರಾಜ್ಯೋತ್ಸವ ಮಾಡುವ ಇವರು ರಾಜ್ಯದ ಸಾಹಿತಿಗಳು, ಚಿಂತಕರು, ಹ್ಯಾಸ ಕಲಾವಿದರು ಹಾಗೂ ಅನೇಕ ಗಾಯಕರನ್ನು ಕರೆಸಿ ಕನ್ನಡ ಕಾರ್ಯಕ್ರಮ ಮಾಡುತ್ತಾರೆ.1968 ರಲ್ಲಿ ಈ ಕನ್ನಡ ಸಂಘ ಸ್ಥಾಪನೆಯಾಗಿದ್ರೂ, 2009ರಿಂದ ಪ್ರತಿ ತಿಂಗಳು ಕನ್ನಡಹಬ್ಬ ನಡೀತಿದೆ. ಕನ್ನಡದ ವೈಭವ ಹೆಚ್ಚಿಸಲು ಇಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಐಎಎಸ್ ಹಾಗೂ ಕೆಎಎಸ್‍ನಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿದೆ.ಯಾರಿಂದಲೂ ಆರ್ಥಿಕ ಸಹಾಯದ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ಕನ್ನಡ ಸಂಘದ ಅಧ್ಯಕ್ಷ ಸುಬ್ರಮಣಿ ಅವರು ಕನ್ನಡ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.Sign in to your account
Username or Email Address


Password

 Remember Me


