ರಾಯಚೂರು: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಕಾಮುಕನೋರ್ವನನ್ನು ಗ್ರಾಮಸ್ಥರು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ರಾಯಚೂರಿನ ಲಿಂಗಸುಗೂರಿನ ಗುರುಗುಂಟಾದಲ್ಲಿ ನಡೆದಿದೆ.ಬಸಟೆಪ್ಪ ಥಳಿತಕ್ಕೊಳಗಾದ ಯುವಕ. ಗ್ರಾಮದ ಅಮರೇಶ್ವರ ದೇವಸ್ಥಾನದ ಬಳಿ ಕಾಮುಕನನ್ನ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿದ್ದಾರೆ. ಈತ ದೇವಸ್ಥಾನದಲ್ಲಿ ಮಹಿಳೆಯರ ಪಕ್ಕ ಮಲಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆಯರು ಗ್ರಾಮಸ್ಥರಿಗೆ ತಿಳಿಸಿದ್ದರು.ಯುವಕನ ಪುಂಡಾಟಿಕೆ ಮಿತಿಮೀರಿದ್ದರಿಂದ ಗ್ರಾಮಸ್ಥರು ಥಳಿಸಿದ್ದಾರೆ. ನಂತರ ಯುವಕ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಕ್ಕೆ ಪೊಲೀಸರಿಗೆ ಒಪ್ಪಿಸದೇ ಹಾಗೇ ಕಳುಹಿಸಿದ್ದಾರೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Sign in to your account
Username or Email Address


Password

 Remember Me


