ಮೈಸೂರು: ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರ ಮೇಲೆ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆಮೈಸೂರಿನ ಸುಬ್ಬರಾಯನ ಕೆರೆ ಬಳಿ ಸರ್ಕಾರೇತರ ಸಂಸ್ಥೆಯಿಂದ ‘ನೋ ಜಾಬ್ ನೋ ವೋಟ್’ ಅಭಿಯಾನ ನಡೆಯುತ್ತಿತ್ತು. ಈ ಮೂಲಕ ಸಿಎಂ ಅವರಿಗೆ ಪ್ರತಿಭಟನಾಕಾರರು ವರುಣಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದರು.ಈ ಸಂದರ್ಭದಲ್ಲಿ ಚಂದ್ರ ಮಿಶ್ರಾ ಎಂಬವರು ಸಿಎಂ ಭಾವಚಿತ್ರ ಹಾಕಿಕೊಂಡು ಪ್ರತಿಭಟನೆಗೆ ಸಜ್ಜಾಗಿದ್ದರು. ಈ ವೇಳೆ ವಾರ್ಡ್ ನಂಬರ್ 36 ಪಾಲಿಕೆ ಸದಸ್ಯ ಪ್ರಶಾಂತ್‍ಗೌಡ ಈ ಪ್ರತಿಭಟನೆಗೆ ತಕಾರರು ತೆಗೆದು ಹೋರಾಟಗಾರ ಚಂದ್ರ ಮಿಶ್ರಾ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.ಈ ಬಗ್ಗೆ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ಚಂದ್ರ ಮಿಶ್ರಾ ಅವರು ಪ್ರಶಾಂತ್ ಗೌಡರ ವಿರುದ್ಧ ದೂರು ದಾಖಲಿಸಿದ್ದಾರೆ. ಹೋರಾಟಗಾರನ ಮೇಲೆ ಹಲ್ಲೆ ಆರೋಪವನ್ನು ನಗರಪಾಲಿಕೆ ಸದಸ್ಯ ಪ್ರಶಾಂತಗೌಡ ನಿರಾಕರಿಸಿದ್ದಾರೆ. ಅನುಮತಿ ಪಡೆಯದೆ ನನ್ನ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿತ್ತು. ಈ ವೇಳೆ ಪಾಲಿಕೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದರು. ಫ್ಲೆಕ್ಸ್ ತೆರವುಗೊಳಿಸಲು ಪ್ರತಿಭಟನಾ ನಿರತರಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ನಾನು ವಿಚಾರಿಸಲು ಹೋಗಿದ್ದೆ. ಈ ವೇಳೆ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಚಂದ್ರ ಮಿಶ್ರ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ಸಾರ್ವಜನಿಕರೇ ಚಂದ್ರ ಮಿಶ್ರರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ವೇಳೆ ಹಲ್ಲೆ ನಡೆದಿರಬಹುದು ಎಂದು ಹೇಳಿದ್ದಾರೆ.https://www.youtube.com/watch?v=7akX9PABrmkSign in to your account
Username or Email Address


Password

 Remember Me


