ಮಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಹಾಕಿದ್ದು ನಾನೇ ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಸದ್ಯ ರವಿ ಪೂಜಾರಿ ತಾನೇ ಸಚಿವರಿಗೆ ಬೆದರಿಕೆ ಹಾಕಿದ್ದು ಅಂತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾನೆ.ಆಡಿಯೋದಲ್ಲಿ ಏನಿದೆ?: ತನ್ವೀರ್ ಸೇಠ್ ಹೆಸರಿಗಸ್ಟೇ ಶಿಕ್ಷಣ ಸಚಿವ. ಅವರಿಂದ ಬಡವರಿಗೆ ತೊಂದರೆಗಳಾಗುತ್ತಿದೆ. ಅವರು ಶ್ರೀಮಂತರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಡವರ ಪರವಾದ ಯಾವ ಕೆಲಸಗಳನ್ನೂ ಮಾಡ್ತಿಲ್ಲ. ಈ ಬಗ್ಗೆ ಬಡವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಶ್ರೀಮಂತರಿಂದ ಸಂಗ್ರಹಿಸಿದ ಹಣ ಸಚಿವರ ಹತ್ರ ಬೇಕಾದಷ್ಟು ಇದೆ. ಅದರಲ್ಲಿ ಹತ್ತು ಕೋಟಿ ನನಗೆ ಕೊಡಲೇಬೇಕು ಅಂತಾ ಹೇಳಿದ್ದೇನೆ.ತನ್ವೀರ್ ಸೇಠ್ ನೀಡಿದ ಪೊಲೀಸ್ ಕೇಸ್‍ಗೆ ತಲೆಕೆಡಿಸಿಕೊಳ್ಳಲ್ಲ. ದೂರು ಕೊಟ್ರೆ ಕೊಡಲಿ, ನಾನೇನು ತಲೆಕೆಡಿಸಿಕೊಳ್ಳಲ್ಲ ಅಂತಾ ರವಿ ಪೂಜಾರಿ ಹೇಳಿದ್ದಾನೆ.ಬೆದರಿಕೆ ಕರೆ ಬಂದ ಬಳಿಕ ತನ್ವೀರ್ ಸೇಠ್ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ.https://youtu.be/CVoLaIKwhk0Sign in to your account
Username or Email Address


Password

 Remember Me


