ಬೆಂಗಳೂರು: ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದ ಮಹಿಳೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಟೆಂಪಲ್ ಬೆಲ್ಸ್ ಪ್ರೀಮಿಯರ್ ಅಪಾರ್ಟ್ ಮೆಂಟ್‍ನಲ್ಲಿ 24 ವರ್ಷದ ನಿರ್ಮಲ ಎಂಬವರು ನೇಣಿಗೆ ಶರಣಾಗಿದ್ದಾರೆ. ಒಂದೂವರೆ ವರ್ಷದ ಹಿಂದೆಯಷ್ಟೇ ಮೈಸೂರಿನ ನಿರ್ಮಲ ಬೆಂಗಳೂರಿನ ವಿಶ್ವನಾಥ್ ಎಂಬವರನ್ನು ಮದುವೆಯಾಗಿದ್ರು. ಜಪಾನಲ್ಲಿ ಕೆಲಸ ಮಾಡ್ತಿರೋ ವಿಶ್ವನಾಥ್ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.ವಿಶ್ವನಾಥ್ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಜಪಾನ್‍ಗೆ ವಾಪಸ್ಸಾಗಿದ್ದರು. ಡೆತ್‍ನೋಟ್‍ನಲ್ಲಿ ನನ್ನ ಸಾವಿಗೆ ಅತ್ತೆ ಪ್ರೇಮ, ಮಾವ ನಾಗರಾಜ್ ಕಿರುಕುಳವೇ ಕಾರಣ ಎಂದು ನಿರ್ಮಲ ಬರೆದಿಟ್ಟಿದ್ದಾರೆ. ಆದರೆ ಪೊಲೀಸರು ಬರೋದಕ್ಕೂ ಮೊದಲೇ ಡೆತ್‍ನೋಟ್ ಹರಿದು ಕಸದ ಬುಟ್ಟಿಗೆ ಎಸೆಯಲಾಗಿದೆ. ಹರಿದು ಹೋಗಿದ್ದ ಡೆತ್ ನೋಟ್ ಕಲೆಹಾಕಿರೋ ಆರ್‍ಆರ್ ನಗರ ಪೊಲೀಸರು ಅತ್ತೆ-ಮಾವ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.Sign in to your account
Username or Email Address


Password

 Remember Me


