ಬೆಳಗಾವಿ: ಸಾಲ ಮಾಡಿ ಮನೆ ಕಟ್ಟಿದ ಮನೆಗೆ ಊರಲ್ಲಿ ಚಿನ್ನದ ಬಿಸ್ಕೇಟ್ ಸಿಕ್ಕಿದೆ ಎಂದು ಯುವಕನೋರ್ವನನ್ನು ಅಪಹರಿಸಿರುವ ಘಟನೆ ಬೆಳಗಾವಿ ತಾಲೂಕಿನ ಸೂಳೇಬಾವಿ ಗ್ರಾಮದಲ್ಲಿ ನಡೆದಿದೆ.23 ವರ್ಷದ ನಾಗರಾಜ್ ಫರೀಟ್ ಎಂಬ ಯುವಕ ವೃತ್ತಿಯಲ್ಲಿ ಲಾಂಡ್ರಿಮನ್. ಸಾಲಸೋಲ ಮಾಡಿ ತನ್ನ ಗ್ರಾಮದಲ್ಲಿ ಎರಡಂತಸ್ತಿನ ಮನೆ ಕಟ್ಟಿದ್ದರು. ಯಾವಾಗ ಮನೆ ಕಟ್ಟೋದಕ್ಕೆ ಶುರು ಮಾಡಿದರೋ ಎಲ್ಲೋ ಈತನಿಗೆ ಲಾಟರಿ ಹೊಡೆದಿರಬೇಕು ಅಥವಾ ನಿಧಿ ಸಿಕ್ಕಿರಬೇಕು ಅಂತಾ ಗ್ರಾಮದ ತುಂಬೆಲ್ಲಾ ವದಂತಿ ಹಬ್ಬಿದೆ.ಗಾಳಿ ಮಾತು ನಂಬಿದ ಕೆಲವು ಸ್ಥಳೀಯ ಯುವಕರು ವಾರದ ಹಿಂದೆ ನಾಗರಾಜ್‍ರನ್ನು ಅಪಹರಿಸಿ 22 ಚಿನ್ನದ ಬಿಸ್ಕೇಟ್ ಕೊಡುವಂತೆ ಕಟ್ಟಿಹಾಕಿ ಬೆದರಿಸಿದ್ದಾರೆ. ಮನಗೆ ಬಂದು ಸರ್ಚ್ ಮಾಡಿ ಏನು ಇಲ್ಲದಿದ್ದಾಗ ಕ್ಷಮೆ ಕೇಳಿ ಬಿಟ್ಟು ಕಳುಹಿಸಿದ್ದಾರೆ. ಗೋಲ್ಡ್ ಬಿಸ್ಕೇಟ್ ವಿಚಾರಕ್ಕೆ ಮತ್ತೆ ಬುಧವಾರ ಸಂಜೆ ನಾಲ್ಕು ಜನರ ತಂಡ ನಾಗರಾಜ್‍ನನ್ನು ಕಾರಿನಲ್ಲಿ ಅಪಹರಿಸಿ ಗನ್ ತೋರಿಸಿ ತಾವು ಪೊಲೀಸರು ಚಿನ್ನದ ಬಿಸ್ಕಟ್ ಕೊಡುವಂತೆ ಹೆದರಿಸಿದ್ದಾರೆ.ಮಗ ಮನೆಯಲ್ಲಿದ್ದದನ್ನ ಕಂಡ ತಾಯಿ ಪೊಲೀಸ್ ಸ್ಟೇಶನ್ ಗೆ ತೆರಳಿ ದೂರು ನೀಡಿದ್ದಾರೆ. ದೂರು ಪಡೆದುಕೊಂಡು ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಐವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


