ಕೊಪ್ಪಳ: ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಆತನ ಪತ್ನಿ ಹಾಗೂ ಮಕ್ಕಳು ಸೇರಿ ಬೆಂಕಿ ಹಚ್ಚಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಯಲಬುರ್ಗಾ ತಾಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಯ್ಯ ಹಿರೇಮಠ್ ಎಂಬ ವ್ಯಕ್ತಿಗೆ ಪತ್ನಿ ದಾಕ್ಷಾಯಣಿ, ಮಕ್ಕಳಾದ ಕುಮಾರಸ್ವಾಮಿ, ವೀರಯ್ಯ ಹಾಗೂ ತಮ್ಮನ ಪತ್ನಿ ಸುಮಿತ್ರಾ ಎನ್ನುವವರು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಪ್ರಭಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಚ್ಚಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಭಯ್ಯ ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ನಿವಾಸಿ. ಕಳೆದ ಐದು ವರ್ಷಗಳಿಂದ ಹರಿಶಂಕರಬಂಡಿಯಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಪತ್ನಿ ಹಾಗೂ ಮಕ್ಕಳು ಪ್ರಭಯ್ಯನಿಗೆ ಬೆಂಕಿ ಹಚ್ಚಿದ್ದರು.ಸದ್ಯ ಪ್ರಭಯ್ಯನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


