ಬೆಂಗಳೂರು: ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ರಾಜಕೀಯ ಸೋಜಿಗ ನಡೆದಿದೆ.ಹೌದು. ಕುಮಾರಕೃಪ ಅತಿಥಿ ಗೃಹದಲ್ಲಿ ಬದ್ಧವೈರಿ ಕಾಂಗ್ರೆಸ್-ಬಿಜೆಪಿ ಜುಗಲ್‍ಬಂದಿ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಇಬ್ಬರೂ ಕುಮಾರಕೃಪ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದಾರೆ. ನೆಲಮಹಡಿಯಲ್ಲಿ ಅಮಿತ್ ಶಾ ಹಾಗೂ ಮೇಲಿನ ಮಹಡಿಯಲ್ಲಿ ವೇಣುಗೋಪಾಲ್ ಇದ್ದಾರೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭೇಟಿಗೆ ಬಂದ ಸಚಿವ ಯು.ಟಿ.ಖಾದರ್ ಅಮಿತ್ ಶಾ ಉಳಿದುಕೊಂಡಿದ್ದ ರೂಂ ಬಳಿ ತೆರಳುತ್ತಿದ್ದರು. ಬಳಿಕ ಅಮಿತ್ ಶಾ ಇರೋದು ತಿಳಿದು ಕಕ್ಕಾಬಿಕ್ಕಿಯಾದ ಯು.ಟಿ ಖಾದರ್ ವಾಪಸ್ ತೆರಳಿದ್ರು.ವಾಕಿಂಗ್‍ಗೆ ಹೋಗಿದ್ದ ವೇಣುಗೋಪಾಲ್ ವಾಪಸ್ ಬಂದಿರಲಿಲ್ಲ. ಇದರ ಮಾಹಿತಿ ಇಲ್ಲದೆ ಖಾದರ್ ವೇಣುಗೋಪಾಲ್ ಭೇಟಿಗೆ ಬಂದಿದ್ದರು.ಈ ನಡುವೆ ವೇಣುಗೋಪಾಲ ಭೇಟಿಯಾಗಲು ಬರುತ್ತಿರುವ ಕಾಂಗ್ರೆಸ್ ನಾಯಕರಿಗೆ ಇರುಸು-ಮುರುಸು ಉಂಟಾಗಿದೆ. ಅಮಿತ್ ಶಾ ಭದ್ರತೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರಿದ್ದಾರೆ. ಅಮಿತ್ ಶಾ ಭೇಟಿಗೆಂದು ಬಿಜೆಪಿ ನಾಯಕರು ಕುಮಾರಕೃಪಾ ಗೆಸ್ಟ್ ಹೌಸ್ ನ ನೆಲಮಹಡಿಯಲ್ಲಿ ಇದ್ದರೆ, ಮೊದಲ ಮಹಡಿಯಲ್ಲಿ ವೇಣುಗೋಪಾಲ್ ಭೇಟಿಗೆ ಕಾಂಗ್ರೆಸ್ ನಾಯಕರು ಕಾದು ನಿಂತಿದ್ದಾರೆ. ಇಬ್ಬರು ನಾಯಕರ ಭೇಟಿಗೆ ಆಗಮಿಸುತ್ತಿರುವ ಉಭಯ ಪಕ್ಷದ ನಾಯಕರು ರಾಜಕೀಯ ಮಾತುಕತೆಯಲ್ಲಿ ತೊಡಗಿದ್ದಾರೆ. ವೇಣುಗೋಪಾಲ ಭೇಟಿಯಾಗಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿಎಲ್ ಶಂಕರ್ ಕೂಡ ಬಂದಿದ್ದರು. ಈ ವೇಳೆ ಬಿಜೆಪಿ ಮುಖಂಡ ಲೇಹರ್ ಸಿಂಗ್ ಹಾಗೂ ದಿನೇಶ್ ಗುಂಡೂರಾವ್ ಕೈ ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ರು.Sign in to your account
Username or Email Address


Password

 Remember Me


