ಬೆಂಗಳೂರು: ಮೂಡಿಗೆರೆ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎನ್‍ಎಸ್‍ಯುಐ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ.ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಧನ್ಯಶ್ರೀ ಆತ್ಮಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಧನ್ಯಶ್ರೀ ಹಿಂದೂ ಅಲ್ಲವೇ. ದೀಪಕ್ ರಾವ್ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಪ್ರವೀಣ್ ಪೂಜಾರಿ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಆದರೆ ಧನ್ಯಶ್ರೀ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಇರುವುದರಿಂದ ಮಾತನಾಡುತ್ತಿಲ್ವಾ. ದೀಪಕ್ ರಾವ್ ಬಗ್ಗೆ ಒಂದು ಧನ್ಯಶ್ರೀ ಬಗ್ಗೆ ಒಂದು ಸಿದ್ಧಾಂತ ನಿಮ್ಮದು. ಮೊದಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು ಜಿಹಾದಿಗಳು ನೀವು ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಕುರಿತಂತೆ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧನ್ಯಶ್ರೀ ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಅನಿಲ್ ಕೈವಾಡ ಇದೆ. ಆದ್ದರಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಈ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾರ್ಯಕರ್ತರು ಬಿಜೆಪಿ ನಾಯಕರನ್ನು ದೂಷಿಸಿದರು.Sign in to your account
Username or Email Address


Password

 Remember Me


