ತುಮಕೂರು: ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರೊಬ್ಬರಿಗೆ ಧಮ್ಕಿ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.ಮಲ್ಲಸಂದ್ರದ ಬಳಿ ಇರುವ ಹಕ್ಕಿಗೂಡು ಅನ್ನೋ ಹೋಟೆಲ್ ನಲ್ಲಿ ಈ ಅವಾಂತರ ನಡೆದಿದೆ. ಕೊರಟಗೆರೆಯ ನಿವಾಸಿ ನಾಗರಾಜ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಕ್ಕಿಗೂಡು ಹೋಟೆಲ್ ಗೆ ತಿಂಡಿ ತಿನ್ನಲು ಹೋಗಿದ್ದಾರೆ. ಅಲ್ಲಿ ದೋಸೆ ಆರ್ಡರ್ ಮಾಡಿದ್ದಾರೆ. ದೋಸೆ ಜೊತೆ ಕೊಟ್ಟ ಸಾಗುವಿನಲ್ಲಿ ಜಿರಳೆ ಬಿದ್ದಿರೋದು ಪತ್ತೆಯಾಗಿದೆ.ಇದನ್ನ ಹೋಟೆಲ್ ಸಪ್ಲೈಯರ್ ಹಾಗೂ ಸಿಬ್ಬಂದಿಗಳಿಗೆ ಕರೆದು ತೋರಿಸಿದ್ದಾರೆ. ಅಲ್ಲದೆ ನಾಗರಾಜ್ ಇದನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಬ್ಬಂದಿ ನಾಗರಾಜ್ ಅವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.ಹಕ್ಕಿಗೂಡು ಹೋಟೆಲ್ ಹೆದ್ದಾರಿ ಪಕ್ಕದಲ್ಲಿ ಇರೋದ್ರಿಂದ ಪ್ರತಿನಿತ್ಯ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣಿಕರಿಗೆ ಇಲ್ಲೇ ತಿಂಡಿ, ಊಟಕ್ಕೆ ನಿಲ್ಲಿಸ್ತಾರೆ.https://www.youtube.com/watch?v=OAfcHUORoqkSign in to your account
Username or Email Address


Password

 Remember Me


