ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.ಬೆಂಗಳೂರಿನ ಅಬ್ಬಿಗೆರೆ ಮೂಲದ ತೇಜಸ್(16) ಹುಟ್ಟುಹಬ್ಬದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್‍ನಲ್ಲಿ ತೇಜಸ್ ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೊಲೀಸರು ಡೆತ್‍ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ತಾಯಿಯನ್ನು ಕಳೆದುಕೊಂಡ ನೋವಿನ ಬಗ್ಗೆ ತೇಜಸ್ ಉಲ್ಲೇಖಿಸಿದ್ದಾನೆ. ಜೊತೆಗೆ ತಂದೆಗೆ ಬೆನ್ನು ನೋವು ಇದ್ದ ಬಗ್ಗೆಯೂ ನೊಂದುಕೊಂಡಿದ್ದ ಎಂದು ಹೇಳಲಾಗಿದೆ.ಸೋಮವಾರದಂದು ತೇಜಸ್ ಹುಟ್ಟುಹಬ್ಬವಿದ್ದಿದ್ದರಿಂದ ಪೋಷಕರು ಆತನನ್ನು ಭೇಟಿಯಾಗಿ ತೆರಳಿದ್ದರು. ತೇಜಸ್ ತಾಯಿ ಈ ಹಿಂದೆಯೇ ಸಾವನ್ನಪ್ಪಿದ್ದರು. ನಿನ್ನೆ ತಂದೆ ಹಾಗೂ ತಂದೆಯ ಎರಡನೇ ಹೆಂಡತಿ ತೇಜಸ್‍ ನನ್ನು ಭೇಟಿಯಾಗಿ ಮಾತನಾಡಿದ್ದರು. ಈ ವೇಳೆ ತನ್ನ ಬೆನ್ನು ನೋವಿನ ಬಗ್ಗೆ ತಂದೆ ಹೇಳಿದ್ದರು. ತಂದೆಗೆ ಬೆನ್ನು ನೋವು ಕಾಡುತ್ತಿದ್ದ ಬಗ್ಗೆ ಸಂಜೆ ವೇಳೆ ಕೂಡ ನೊಂದುಕೊಂಡಿದ್ದ ಎಂದು ತೇಜಸ್ ಸ್ನೇಹಿತರು ಹೇಳಿದ್ದಾರೆ.ನಿನ್ನೆ ರಾತ್ರಿ 7.30 ರ ಸುಮಾರಿಗೆ ತೇಜಸ್ ಹಾಸ್ಟೆಲ್‍ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯಕಳೆದ ವರ್ಷ ಆಳ್ವಾಸ್‍ನಲ್ಲಿ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಕಾವ್ಯಾ(15) 2017ರ ಜುಲೈ 20ರಂದು ಹಾಸ್ಟೆಲ್‍ನಲ್ಲಿ ಮೃತಪಟ್ಟಿದ್ದಳು. ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದ್ರೆ ಕಾವ್ಯಾ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದರು.https://www.youtube.com/watch?v=bErE1Ufa2RUSign in to your account
Username or Email Address


Password

 Remember Me


