ಬೆಂಗಳೂರು: ಫೇಸ್‍ಬುಕ್ ನಲ್ಲಿ ಪರಿಚಯಗೊಂಡಿದ್ದ ಮಹಿಳೆಯಿಂದಾಗಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 20 ಲಕ್ಷ ರೂ. ಕಳೆದುಕೊಂಡಿದ್ದಾರೆ.ಆದಿನಾರಾಯಣ್ ಮೋಸಕ್ಕೊಳಗಾದ ರಿಯಲ್ ಎಸ್ಟೇಟ್ ಉದ್ಯಮಿ. ಆದಿನಾರಾಯಾಣ್‍ರಿಗೆ ಫೇಸ್‍ಬುಕ್ ನಲ್ಲಿ ಅಮೆರಿಕ ಮೂಲದ ಮಹಿಳೆ ಪರಿಚಯವಾಗಿದ್ದಳು. ಮಹಿಳೆ ಪ್ರತಿದಿನ ಆದಿನಾರಾಯಣ್ ಜೊತೆ ಚಾಟ್ ಮಾಡುತ್ತಾ ಸ್ನೇಹ ಸಂಪಾದಿಸಿದ್ದಾಳೆ. ತಾನು ಬೆಂಗಳೂರಲ್ಲಿ ಅಪಾರ್ಟ್ ಮೆಂಟ್ ಖರೀದಿಸಬೇಕು ಅಂತಾ ಹೇಳಿದ್ದಾಳೆ.ಮಹಿಳೆ ತಾನು 2 ದಶಲಕ್ಷ ಡಾಲರ್ ಹಣವಿರುವ ಸೂಟ್‍ಕೇಸ್ ಕಳುಹಿಸುತ್ತಿದ್ದು, 20 ಲಕ್ಷ ರೂ. ಭಾರತೀಯ ತೆರಿಗೆ ಪಾವತಿಸಿ ತೆಗೆದುಕೊಳ್ಳುವಂತೆ ತಿಳಿಸಿದ್ದಾಳೆ. ಆದಿನಾರಾಯಾಣ್ ಆಕೆ ಹೇಳಿದಂತೆ 20 ಲಕ್ಷ ರೂ. ಹಣ ನೀಡಿ ಸೂಟ್‍ಕೇಸ್ ಪಡೆದುಕೊಂಡಿದ್ದಾರೆ. ಸೂಟ್‍ಕೇಸ್ ತೆರೆದಾಗ ಅದರಲ್ಲಿ ಕೇವಲ ಕಪ್ಪು ನೋಟುಗಳಿದ್ದನ್ನು ನೋಡಿದ ಮೇಲೆ ತಾನು ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ.ಈ ಸಂಬಂಧ ಆದಿನಾರಾಯಣ್ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. Sign in to your account
Username or Email Address


Password

 Remember Me


