ಬಳ್ಳಾರಿ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ದರ್ಪ ದಬ್ಬಾಳಿಕೆಗೆ ಕಡಿವಾಣವೇ ಇಲ್ಲದಂತಾಗಿದೆ ಎನ್ನುವ ಸಾರ್ವಜನಿಕರ ಟೀಕೆ ಪುಷ್ಟಿ ಎನ್ನುವಂತೆ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಜಡೆ ಹಿಡಿದು ಎಳೆದಾಡಿ, ಹಣ್ಣುಗಳನ್ನು ನೆಲಕ್ಕೆ ಚೆಲ್ಲಿ ಮಹಿಳಾ ಎಎಸ್‍ಐಯೊಬ್ಬರು ದರ್ಪ ತೋರಿದ್ದಾರೆ.ಸೋಮವಾರ ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಜೊತೆ ಟ್ರಾಫಿಕ್ ಠಾಣೆಯ ಮಹಿಳಾ ಎಎಸ್‍ಐ ಸುವಾರ್ತಾ ಅವರು ದರ್ಪ ತೋರಿದ್ದಾರೆ.ಮಹಿಳಾ ವ್ಯಾಪಾರಿಯು ತಳ್ಳುಗಾಡಿಯಿಟ್ಟು ವ್ಯಾಪಾರ ಮಾಡುತ್ತಿದ್ದ ಪರಿಣಾಮ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಾರಿ ಮತ್ತು ಎಎಸ್‍ಐ ನಡುವಿನ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಎಎಸ್‍ಐ ಆಕ್ರೋಶಗೊಂಡು ವ್ಯಾಪಾರಿಯ ಜಡೆ ಹಿಡಿದು ಎಳೆದಾಡಿದ್ದಾರೆ.ಮಹಿಳಾ ಎಎಸ್‍ಐ ದರ್ಪವನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.https://www.youtube.com/watch?v=kUkTId_IaGYSign in to your account
Username or Email Address


Password

 Remember Me


