ಬೆಂಗಳೂರು: ರಾಜಕಾಲುವೆಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರದ ಬಳಿಯಲ್ಲಿ ನಡೆದಿದೆ.ತನುಶ್ರೀ (3) ಸಾವನ್ನಪ್ಪಿದ ಮಗು. ಕಲುಬುರಗಿ ಮೂಲದ ಲಕ್ಷ್ಮಿ ಹಾಗೂ ಸಾಬಣ್ಣ ದಂಪತಿ ಮಗಳು. ಕಳೆದ 4 ವರ್ಷಗಳ ಹಿಂದೆ ನಗರದಕ್ಕೆ ಬಂದಿದ್ದ ದಂಪತಿ ರಾಜಕಾಲುವೆ ಪಕ್ಕದಲ್ಲಿ ಟೆಂಟ್ ನಿರ್ಮಿಸಿಕೊಂಡು ನೆಲೆಸಿದ್ದರು. ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು.ಬೆಳಗ್ಗೆ ಆಟ ಆಡುವಾಗ ರಾಜಕಾಲುವೆಗೆ ಬಿದ್ದು ಮಗು ಮೃತಪಟ್ಟಿದೆ. ಈ ವೇಳೆ ಎಲ್ಲರೂ ಮನೆ ಒಳಗಡೆ ಇದ್ದರೂ, ಯಾರೂ ಮಗು ರಾಜಕಾಲುವೆಗೆ ಬಿದ್ದಿರುವುದನ್ನು ಗಮನಿಸಿಲ್ಲ. ಮಗು ಕಾಣದೇ ಇದ್ದಾಗ ಹುಡುಕಾಡಿದಾಗ ರಾಜಕಾಲುವೆಗೆ ಬಿದ್ದಿರುವುದು ಗೊತ್ತಾಗಿದೆ.ಈ ಪ್ರದೇಶದಲ್ಲಿ ಸುಮಾರು 20 ಕುಟುಂಬಗಳು ಟೆಂಟ್ ನಿರ್ಮಿಸಿಕೊಂಡು ವಾಸ ನಡೆಸುತ್ತಿವೆ. ರಾಜಕಾಲುವೆ ಸುತ್ತಲೂ ಮನೆಗಳಿದ್ದರೂ ಕಾಲುವೆಯನ್ನು ಮುಚ್ಚಿಲ್ಲ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.https://www.youtube.com/watch?v=5osCCOmeCLoSign in to your account
Username or Email Address


Password

 Remember Me


