ತುಮಕೂರು: ಜಿಲ್ಲೆಯ ತಿಪಟೂರು ಶಾಸಕ ಕೆ. ಷಡಕ್ಷರಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಷಡಕ್ಷರಿ ಎರಡನೇ ಪತ್ನಿ ಮಗ ಆಕರ್ಷಣ್ ಷಡಕ್ಷರಿ, ತನಗೆ ಅಪ್ಪ ಬೇಕು ಎಂದು ಫೇಸ್‍ಬುಕ್ ಮೊರೆ ಹೋಗಿದ್ದಾರೆ.ಆಕರ್ಷಣ್ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಷಡಕ್ಷರಿ ಜೊತೆಗೆ ಇರುವ ಫೋಟೋದೊಂದಿಗೆ ಅಪ್ಪ..ಅಪ್ಪ.. ನನಗೆ ನೀನು ಬೇಕಪ್ಪ ಎಂಬ ಹಾಡನ್ನು ರಿಮಿಕ್ಸ್ ಮಾಡಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪುತ್ರ ಆಕರ್ಷಣ್ ವಿಡಿಯೋದಿಂದಾಗಿ ಶಾಸಕ ಷಡಕ್ಷರಿ ಮುಜುಗರಕ್ಕೆ ಒಳಗಾಗಿದ್ದಾರೆ.ಷಡಕ್ಷರಿ ಅವರು ಮಧು ಎಂಬವರೊಂದಿಗೆ ಎರಡನೇ ಮದುವೆಯಾಗಿದ್ದು, ಆಕರ್ಷಣ್ ಷಡಕ್ಷರಿ ಇವರ ಮಗನಾಗಿದ್ದಾನೆ. ಆದ್ರೆ ಷಡಕ್ಷರಿ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಮಗ ಆಕರ್ಷಣ್ ತನಗೆ ಅಪ್ಪ ಬೇಕು ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಮತ್ತೆ ಫೇಸ್ ಬುಕ್ ಮೂಲಕ ಅಪ್ಪ ಬೇಕು ಎಂದು ಹೇಳುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


