ವಿಜಯಪುರ: ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರನ್ನು ನೋಡಿರುತ್ತೇವೆ. ಆದರೆ ವಿಜಯಪುರದಲ್ಲಿ ಒರ್ವ ಮುಸ್ಲಿಂ ವ್ಯಕ್ತಿ ಅಯ್ಯಪ್ಪ ಸ್ವಾಮಿಗೆ ಮಾಲೆ ಧರಿಸಿದ್ದಾರೆ. ವಿಜಯಪುರದ ಅಲಿಯಾಬಾದ್ ನಿವಾಸಿಯಾದ ಅನ್ವರ್ ಎಂಬವರು ಸೋಮವಾರ ಅಯ್ಯಪ್ಪ ಸ್ವಾಮಿಯ ಮಾಲೆ ಧಾರಣೆ ಮಾಡಿದ್ದಾರೆ.ನಿರಂತರ 5 ವರ್ಷಗಳಿಂದ ಅನ್ವರ್ ಮಾಲೆ ಧಾರಣೆ ಮಾಡುತ್ತ ಬರುತ್ತಿದ್ದು, ಇದರಿಂದ ನಾನು ಮತ್ತು ನನ್ನ ಕುಟುಂಬ ಖುಷಿಯಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಅನೇಕ ಕಷ್ಟಗಳು ಮಾಲೆ ಧಾರಣೆಯ ನಂತರ ಪರಿಹಾರ ಆಗಿವೆ ಎಂದು ಅನ್ವರ್ ತಿಳಿಸಿದ್ದಾರೆ. ಇನ್ನು ಇದಕ್ಕೆ ಅವರ ಮನೆಯವರು ಸಾಥ್ ನೀಡಿದ್ದು, ಅನ್ವರ್ ಮೂರು ದಿನಗಳ ಕಾಲ ಮಾಲ ಧಾರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಹಿಂದಿರುಗುತ್ತಾರೆ.Sign in to your account
Username or Email Address


Password

 Remember Me


