ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಹತ್ಯೆಯ ಬಳಿಕ ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಕೊಲೆಯ ಯತ್ನಿಸಲಾಗಿದೆ.ಹಿಂಜಾವೇ ಮುಖಂಡರಾಗಿರುವ ಭರತ್ ಅಗರಮೇಲು ಅವರ ಕೊಲೆಯ ಯತ್ನ ಮಾಡಲಾಗಿದೆ. ರಾತ್ರಿ ತಮ್ಮ ಮನೆಯತ್ತ ಭರತ್ ತೆರಳುತ್ತಿದ್ದರು, ಈ ವೇಳೆ ಮಾರ್ಗ ಮಧ್ಯೆ ದುಷ್ಕರ್ಮಿಗಳು ಬೈಕ್ ಹಿಡಿದುಕೊಂಡು ಬಂದಿದ್ದಾರೆ. ಬೈಕಿನ ಹೈಡ್ ಲೈಟ್ ಬೆಳಕಿನಿಂದ ದುಷ್ಕರ್ಮಿಗಳನ್ನು ಗಮನಿಸಿದ ಭರತ್ ಕೂಡಲೇ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾರೆ.ನಾಲ್ವರು ದುಷ್ಕರ್ಮಿಗಳು ಎದುರಿಗೆ ಬರುತ್ತಿದ್ದಂತೆ ನಾನು ಬೈಕ್ ಬಿಟ್ಟು ತಪ್ಪಿಸಿಕೊಂಡೆ. ದುಷ್ಕರ್ಮಿಗಳ ಕೈಯಲ್ಲಿ ತಲ್ವಾರ್‍ಗಳಿದ್ದರಿಂದ ನಾನು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಅಂತಾ ಭರತ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


