ಚಿತ್ರದುರ್ಗ: ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗವನ್ನ ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ.ನಗರದ ಚಂದ್ರವಳ್ಳಿ ಬಳಿ ಒಂಟಿಯಾಗಿ ಜನರ ಹಿಂದೆ ಹಿಂದೆ ಹೋಗುತ್ತಿದ್ದ ಕೃಷ್ಣ ಮೃಗವನ್ನ ಚಿತ್ರದುರ್ಗದ ಯುವಕ ನವೀನ್ ಮತ್ತು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಕೃಷ್ಣಮೃಗವನ್ನ ಅರಣ್ಯ ಇಲಾಖೆ ವಶಕ್ಕೆ ಕೊಟ್ಟಿದ್ದಾರೆ.ಸದ್ಯಕ್ಕೆ ಚಿತ್ರದುರ್ಗ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕೃಷ್ಣಮೃಗಕ್ಕೆ ಚಿಕಿತ್ಸೆ ನೀಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


