ತುಮಕೂರು: ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೆ.ರಾಮಪುರದಲ್ಲಿ ನಡೆದಿದೆ.ಬಂಧಿತರು ಆಂಧ್ರದ ಕಂಬದೂರು ಗ್ರಾಮದವರಾಗಿದ್ದು, ನವಿಲುಗಳನ್ನು ಬೇಟೆಯಾಡಿ ಕೊಂದು ಜೋಳಿಗೆಯಲ್ಲಿ ಹೊತ್ತೊಯ್ಯತ್ತಿದ್ದರು. ಹನುಮನ ಬೆಟ್ಟ ನವಿಲು ಸಂರಕ್ಷಣಾ ಗುಡ್ಡದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಬೇಟೆಯಾಡಿದ್ದರು.ಇದನ್ನು ಗಮನಿಸಿದ ಕೆ. ರಾಮಪುರ ಗ್ರಾಮಸ್ಥರು ಬೇಟೆಗಾರರನ್ನು ಅಟ್ಟಾಡಿಸಿ ಹಿಡಿದು ವೈ.ಎನ್. ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.   Sign in to your account
Username or Email Address


Password

 Remember Me


