ಉಡುಪಿ: ರಾಜ್ಯ ಸರ್ಕಾರ ಮತ್ತೊಮ್ಮೆ ಪೇಚಿಗೆ ಸಿಲುಕಿದೆ. ಅಂದು ಶ್ರೀರಾಮ ಶಾಲೆಯ ಮಕ್ಕಳಿಂದ ಊಟ ಕಿತ್ತುಕೊಂಡವರು ಕಾಂಗ್ರೆಸ್ಸಿಗರಿಗೆ ಊಟ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ನಡೆಯುತ್ತಿದೆ. ರಾಜ್ಯ ಸರ್ಕಾರದ ಸಮಾವೇಶಕ್ಕೆ ಕೊಲ್ಲೂರಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಟೆಂಪೋ- ಲಾರಿಗಳಲ್ಲಿ ಊಟ ಸಾಗಾಟ ಮಾಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೆಎಸ್‍ಆರ್‍ಟಿಸಿ ಅಧ್ಯಕ್ಷ ಗೋಪಾಲ ಪೂಜಾರಿ ಕ್ಷೇತ್ರ ಬೈಂದೂರಲ್ಲಿ ನಡೆಯಲಿರುವ ಸಮಾವೇಶದಲ್ಲಿ ಜನರಿಗೆ ಈ ಊಟದ ವ್ಯವಸ್ಥೆ ಮಾಡಲಾಗಿದೆ.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಸುಮಾರು 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಒಂದು ರೂಪಾಯಿಯೂ ನೀಡಿಲ್ಲ. ಕಳೆದ ರಾತ್ರಿಯಿಂದ ಅಡುಗೆ ಕಾರ್ಯ ನಡೆದಿದೆ. ಅಕ್ಕಿ, ಬೇಳೆ, ತರಕಾರಿಗೆ ದೇವಸ್ಥಾನದ ದಿನಸಿ ಬಳಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶ್ರೀರಾಮಶಾಲೆಯ ಮಕ್ಕಳಿಂದ ಊಟ ಕಿತ್ತುಕೊಂಡಿದ್ದ ಸರ್ಕಾರ, ಈಗ ಕಾಂಗ್ರೆಸ್ ಕಾರ್ಯಕರ್ತರಿಗೇಕೆ ಊಟ ಕೊಡ್ತೀರಿ? ಎಂದು ಜನ ಪ್ರಶ್ನೆ ಮಾಡಿದ್ದಾರೆ. ವಾಟ್ಸಪ್- ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ:  ಊಟ ಕಿತ್ಕೊಂಡ ಸರ್ಕಾರಕ್ಕೆ ಸೆಡ್ಡು – ತಾವೇ ಭತ್ತ ಬೆಳೆದ ಕಲ್ಲಡ್ಕ ಶಾಲೆ ಮಕ್ಕಳುhttps://www.youtube.com/watch?v=vZeRdh2Q-kE Sign in to your account
Username or Email Address


Password

 Remember Me


