ಕಾರವಾರ: ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದಿದರಿಂದ ಅಯ್ಯಪ್ಪ ಮಾಲಾಧಾರಿಗಳು ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ನೆಲಗುಣಿ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದಿದೆ.ಶನಿವಾರ ರಾತ್ರಿ ಅಯ್ಯಪ್ಪ ಸ್ವಾಮಿ ಭಕ್ತರು ಕೊಂಡ ಹಾಯುವಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾಲಾಧಾರಿಯಾಗಿದ್ದ 5ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರಜ್ವಲ್ ಜೊತೆಯಲ್ಲಿದ್ದ ಗುರು ಸ್ವಾಮಿ ಮಾಲಾಧಾರಿಗೂ ಗಾಯಗಳಾಗಿವೆ.ವಿಡಿಯೋದಲ್ಲಿ ಏನಿದೆ?: ಗುರು ಸ್ವಾಮಿ ಮಾಲಾಧಾರಿಗಳು ತಮ್ಮ ಕೈಯಲ್ಲಿ ಚಿಕ್ಕ ಬಾಲಕರನ್ನು ಹಿಡಿದುಕೊಂಡು ದಾಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಬಂದ ಒಬ್ಬರು ಸಲೀಸಾಗಿ ಕೊಂಡ ಹಾಯುತ್ತಾರೆ. ಎರಡನೇಯದಾಗಿ ಬರುವ ವ್ಯಕ್ತಿ ತಮ್ಮ ಜೊತೆಯಲ್ಲಿ ಪ್ರಜ್ವಲ್ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕೊಂಡದ ಮಧ್ಯಭಾಗದಲ್ಲಿ ಬಂದಾಗ ಕಾಲುಜಾರಿ ಬಿದ್ದಿದ್ದಾರೆ.ಈ ಘಟನೆಯಲ್ಲಿ ಗುರು ಸ್ವಾಮಿ ಮತ್ತು ಪ್ರಜ್ವಲ್ ಇಬ್ಬರ ದೇಹದ ಬಹುತೇಕ ಭಾಗಗಳು ಸುಟ್ಟ ಹೋಗಿದೆ ಎಂದು ತಿಳಿದು ಬಂದಿದೆ. ಬಾಲಕ ಪ್ರಜ್ವಲನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.Sign in to your account
Username or Email Address


Password

 Remember Me


