ಚಿಕ್ಕಬಳ್ಳಾಪುರ: ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಅವತಿ ಬಳಿ ನಡೆದಿದೆ.ಬುಳ್ಳಹಳ್ಳಿಯ ವೇಣುಗೋಪಾಲ್ ಎಂಬುವರ ಮಗಳು ಅಂಜು ಮೃತ ಬಾಲಕಿ. ಬೆಂಗಳೂರು ಮೂಲದ ನಿಕಿತ್ ಸ್ನೇಹಿತರೊಂದಿಗೆ ಬೈಕ್ ರೇಸಿಂಗ್ ಮಾಡುತ್ತಾ ಕೋಲಾರದ ಅಂತರಗಂಗೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಅಂಜು ಅವತಿಯಿಂದ ಕುಡಿಯುವ ನೀರು ತೆಗೆದುಕೊಂಡು ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ.ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಥಳಿಸಿದ್ದಾರೆ. ಇನ್ನು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 2 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


