ಬೆಂಗಳೂರು: ಸಿಎಂ ಹಿಂದೂ ಆಗಿದ್ದೇ ಆದ್ರೆ ಗೋಹತ್ಯೆ ತಡೆಯಲಿ. ಲವ್ ಜಿಹಾದ್ ತಡೆಯಲಿ. ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡದವರು ನಿಜವಾದ ಹಿಂದೂನಾ ಅಂತ ವಿಪಕ್ಷ ನಾಯಕ ಈಶ್ವರಪ್ಪ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆಸಿಎಂ ವಿರುದ್ಧ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಮುಸ್ಲಿಂ ಗೂಂಡಾಗಳು ಹೆಚ್ಚಾಗಿದ್ದಾರೆ. ಕೆಲ ಮುಸ್ಲಿಮರು ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಂದೂ ಅಂತಾ ಹೇಳಿಕೊಳ್ತಾರೆ. ಸಿಎಂ ಹಿಂದೂ ಆಗಿದ್ರೆ ಗೋಹತ್ಯೆ ತಡೆಯಲಿ. ಲವ್ ಜಿಹಾದ್ ತಡೆಯಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಶೀರ್ ಸಾವಿನ ಕುರಿತು ಸಂಸದ ಪ್ರತಾಪ್ ಸಿಂಹ ಹೀಗಂದ್ರುಕೃಷ್ಣನ ದೇವಸ್ಥಾನದವರು ಕರೆದಿಲ್ಲ ಅಂತಾರೆ ಸಿಎಂ. ಆದ್ರೆ ಅದೇನ್ ಮದ್ವೆನಾ ಸಿದ್ದರಾಮಯ್ಯ ಅವರನ್ನ ಕರೆಯೋದಕ್ಕೆ? ನಿಮ್ಮ ಕೈಯಲ್ಲಿ ಆರ್ ಎಸ್‍ಎಸ್ ನಿಷೇಧ ಮಾಡೋಕೆ ಆಗಲ್ಲ. ನಿಮಗಷ್ಟೇ ಅಲ್ಲ, ರಾಹುಲ್ ಗಾಂಧಿಗೂ ಆಗಲ್ಲ ಅಂತ ಅವರು ಸವಾಲ್ ಹಾಕಿದರು. ಇದನ್ನೂ ಓದಿ: ಬಿಜೆಪಿ ನಾಯಕ ಕೃಷ್ಣ ಪಾಲೇಮಾರ್ ವಿರುದ್ಧ ಬಶೀರ್ ಕುಟುಂಬಸ್ಥರ ಆಕ್ರೋಶSign in to your account
Username or Email Address


Password

 Remember Me


