ದಾವಣಗೆರೆ: ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಸರ್ಕಾರಿ ವೈದ್ಯರು ಹೇಳಿದ ಘಟನೆ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಯಳಗೋಡು ಗ್ರಾಮದ ರುದ್ರಮುನಿ ಹಾಗೂ ಅನಿತಾ ದಂಪತಿಯ ಗಂಡು ಶಿಶು ಸಾವನ್ನಪ್ಪಿದ್ದು, ತನ್ನ ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶನಿವಾರ ಬೆಳಗ್ಗೆ ಅನಿತಾ ಎಂಬವರಿಗೆ ಡೆಲಿವರಿಯಾಗಿದ್ದು, ಶಿಶು ಅರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಸಂಜೆಯವರೆಗೂ ಐಸಿಯುನಲ್ಲಿ ಇಟ್ಟು ರಾತ್ರಿ 1 ಗಂಟೆಗೆ ಸುಮಾರಿಗೆ ಶಿಶು ಸಾವನ್ನಪ್ಪಿದೆ ಎಂದು ಹೇಳಿದ್ದರು. ಸಾವನ್ನಪ್ಪಿದ ಶಿಶುವನ್ನು ತೆಗೆದುಕೊಂಡು ಹೊರಬಂದು ಕುಳಿತ ತಕ್ಷಣ ಶಿಶುವಿನ ಕೈಗಳು ಚಲನವಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಖಾಸಗಿ ಅಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಷ್ಟರೊಳಗೆ ಮಗು ಸಾವನ್ನಪ್ಪಿದೆ.ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಹೇಳಿದ ವೈದ್ಯರ ವಿರುದ್ಧ ಪೋಷಕರ ಅಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಆಸ್ಪತ್ರೆಯ ಮುಂದೆ ಪೋಷಕರ ಗೋಳು ಮುಗಿಲು ಮುಟ್ಟಿತ್ತು.Sign in to your account
Username or Email Address


Password

 Remember Me


