ಮೈಸೂರು: ಇಬ್ಬರು ಮಾನಸಿಕ ರೋಗಿಗಳನ್ನ ಕೊಠಡಿಯಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ನಡೆದಿದೆ.ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ 2ನೇ ಮಹಡಿಯಲ್ಲಿಯ ಕೊಠಡಿಯಲ್ಲಿ ಇಬ್ಬರು ಮಾನಸಿಕ ರೋಗಿಗಳನ್ನು ಬಂಧನದಲ್ಲಿ ಇರಿಸಲಾಗಿದೆ. ಕೊಠಡಿಗಳು ಕೆಆರ್ ಆಸ್ಪತ್ರೆ ನಿರ್ವಹಣೆಗೆ ಒಳಪಟ್ಟಿದೆ.ಕೊಠಡಿಯಲ್ಲಿ ಕೂಡಿ ಹಾಕಿರುವ ಇಬ್ಬರು ಮಾನಸಿಕ ರೋಗಿಗಳಿಗೂ ಯಾವುದೇ ಶುಶ್ರೂಷೆಯನ್ನು ನೀಡಿಲ್ಲ. ಇನ್ನು ರೋಗಿಗಳಿಗೆ ಯಾರು ವಾರಸುದಾರರಿಲ್ಲದೆ ಇರುವುದರಿಂದ ಪ್ರಾಣಿಗಳಿಗಿಂತ ಹೀನವಾಗಿ ನೋಡಿಕೊಳ್ಳಲಾಗಿದೆ. ರೋಗಿಗಳು ಕುಳಿತಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿದ್ದು, ಸ್ಪಚ್ಚತೆ ಎಂಬುವುದು ಮರೀಚಿಕೆಯಾಗಿದೆ.Sign in to your account
Username or Email Address


Password

 Remember Me


