ರಾಮನಗರ: ಕುಮಾರಸ್ವಾಮಿಯವರು (HD Kumaraswamy) ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡ್ತಾರೆ. ಸಿಎಂ, ಡಿಸಿಎಂ ಹಾಗೂ ಸಚಿವರು ಕಳೆದ ಐದು ತಿಂಗಳಿಂದ ಯಾವುದೇ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎಂಬ ಬಾಲಿಶ ಹೇಳಿಕೆ ಕೊಡುತ್ತಾರೆ ಎಂದು ಶಾಸಕ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್‍ಡಿಕೆ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅವರಿಗೆ ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ. ಅವರು ದೇವೇಗೌಡರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳಿ. ದೇವೇಗೌಡರು ದುಡ್ಡು ತಿಂದಿಲ್ಲ ಎಂದು ಬಂದು ಪ್ರಮಾಣ ಮಾಡ್ತಾರಾ? ಅವರ ಕುಟುಂಬದವರು ದುಡ್ಡು ತಿಂದಿಲ್ಲ ಎಂದರೆ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಮಾಡಿದ್ರೆ ಕತ್ತರಿ ಅವ್ರ ಹೊಟ್ಟೆಯಲ್ಲೇ ಸಿಕ್ಕಿಕೊಳ್ಳುತ್ತೆ – ಬಿಜೆಪಿಗೆ ಶಿವರಾಜ್ ತಂಗಡಗಿ ತಿರುಗೇಟುಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು. ಸರಿ ನಾವೆಲ್ಲರೂ ಕಳ್ಳರೇ ಎಂದು ಒಪ್ಪಿಕೊಳ್ಳುತ್ತೇವೆ. ನಾನು ಸತ್ಯಹರಿಶ್ಚಂದ್ರ, ನಾವೇನು ತಿಂದಿಲ್ಲ ಎಂದು ಕುಮಾರಸ್ವಾಮಿ ಆಣೆ ಮಾಡಲಿ. ಆಣೆ ಮಾಡಲು ಅವರು ಇವರನ್ನು ಕರೆಯುವುದಲ್ಲ. ನೀವು ಮೋದಿ ಕರೆಯಿರಿ ಎಂದರೆ ಕರೆಯೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.ಇನ್ನೂ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ, ಅಭಿವೃದ್ಧಿಗಾಗಿ ಬದಲಾವಣೆ ಅನಿವಾರ್ಯವಾಗಿದೆ. ಹೆಚ್‍ಡಿಕೆ ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್‌ ಕೇಸ್‌ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರುWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


