ಯಾದಗಿರಿ: ಪಾಪ, ಆ ನಾಯಿಗೆ ಹೊಡಿಯಬೇಡ ಅಂತಾ ಹೇಳಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ.ಬಸಪ್ಪ ಎಂಬವರೇ ಹಲ್ಲೆಗೊಳಾಗದ ವ್ಯಕ್ತಿ. ಗೆದ್ದಲಮರಿ ಗ್ರಾಮದ ನಿವಾಸಿ ಪರಮಣ್ಣ ಎಂಬವರ ಸಾಕು ನಾಯಿ ನೆರೆಮನೆಯ ಬಸಪ್ಪರ ಮನೆಗೆ ನಾಲ್ಕು ತಿಂಗಳಿನಿಂದ ಹೋಗುತ್ತಿತ್ತು. ಇಂದು ಸಹ ಪರಮಣ್ಣರ ನಾಯಿ ಬಸಪ್ಪರ ಮನೆಗೆ ನುಗ್ಗಿದೆ. ಇದರಿಂದ ಕೋಪಗೊಂಡ ಪರಮಣ್ಣ ಮತ್ತು ಆತನ ಮಗ ಸಾಬಣ್ಣ ನಾಯಿಗೆ ಹೊಡೆದಿದ್ದಾರೆ.ಈ ವೇಳೆ ಬಸಪ್ಪ ನಾಯಿಗೆ ಏತಕ್ಕೆ ಹೊಡೆಯುತ್ತೀರಿ, ಹೊಡೆಯಬೇಡಿ ಅಂತಾ ಹೇಳಿದ್ದಾರೆ. ಬುದ್ದಿಮಾತು ಹೇಳಿದಕ್ಕೆ ಕೋಪಗೊಂಡ ಪರಮಣ್ಣ ಮತ್ತು ಸಾಬಣ್ಣ ಇಬ್ಬರೂ ಸೇರಿಕೊಂಡು ಬಸಪ್ಪರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬಸಪ್ಪರನ್ನು ಕೊಡೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


