ಉಡುಪಿ: ಬ್ಯಾಂಕಿನಲ್ಲಿ ಚಿನ್ನದ ಸರ ಅಡವಿಟ್ಟು ಪಡೆದ ಸಾಲದ ಹಣ ವಾಪಾಸ್ ನೀಡದ್ದಕ್ಕೆ ಸರವನ್ನು ಹರಾಜು ಹಾಕಿದ್ದರಿಂದ ಗ್ರಾಹಕನೊಬ್ಬ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾಸರಗೋಡು ಸಮೀಪದ ಕುಂಬ್ಳೆಯಲ್ಲಿ ನಡೆದಿದೆ.ಸಾಲ ಮರುಪಾವತಿಸದಿದ್ದಕ್ಕೆ ಚಿನ್ನದ ಸರವನ್ನು ಹರಾಜು ಹಾಕಿದ ಫೈನಾನ್ಸ್ ನವರ ಕ್ರಮವನ್ನು ವಿರೋಧಿಸಿ ಗ್ರಾಹಕನೋರ್ವ ಬ್ಯಾಂಕ್ ನೊಳಗೆ ನುಗ್ಗಿ ಬ್ಯಾಂಕ್ ಮ್ಯಾನೇಜರ್ ಗೆ ಥಳಿಸಿದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ. ಇಮ್ತೀಯಾಝ್ ಹಲ್ಲೆ ಮಾಡಿದ ಆರೋಪಿ. 2016ರಲ್ಲಿ ಇಮ್ತೀಯಾಝ್ 10 ಗ್ರಾಂ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ಬ್ಯಾಂಕ್‍ನಲ್ಲಿ ಅಡವಿಟ್ಟು 20 ಸಾವಿರ ರೂ. ಸಾಲ ಪಡೆದಿದ್ದ.ಒಂದು ವರ್ಷಗಳಿಂದ ನೋಟಿಸ್ ನೀಡಿದ್ರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಚಿನ್ನದ ಸರವನ್ನು ಬ್ಯಾಂಕ್ ನವರು ಹರಾಜು ಹಾಕಿದ್ರು. ಇಂದು ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ಗೆ ಬಂದ ಇಮ್ತೀಯಾಝ್ ಬ್ಯಾಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಲ್ಯಾಪ್ ಟಾಪ್ ಗಳನ್ನು ಬಿಸಾಡಿ ಬ್ಯಾಂಕ್ ಮ್ಯಾನೇಜರ್ ಅಶ್ವಿನಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಅಶ್ವಿನಿಯನ್ನು ಕುಂಬ್ಳೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಲ್ಲೆ ಮಾಡಿದ ಇಮ್ತಿಯಾಝ್ ವಿರುದ್ಧ ಕುಂಬ್ಳೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


