ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರ ಸಾಧನ ಸಮಾವೇಶದ ವೇಳೆ ತನ್ನ ನೋವು ತೋಡಿಕೊಳ್ಳಲು ಬಂದ ವಿಕಲಚೇತನರೊಬ್ಬರನ್ನು ಪೊಲೀಸರು ಎಳೆದು ಹೊರಹಾಕಿರೋ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಕಡೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸಾರುತ್ತಿರೋ ಸಾಧನಾ ಸಮಾವೇಶ ನಡೆಯುತ್ತಿತ್ತು. ಈ ವೇಳೆ ವಿಕಲಚೇತನರೊಬ್ಬರು ತಮಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದರ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗದಿರುವುದರಿಂದ ಮನನೊಂದು ಸಿಎಂ ಅವರಿಗೆ ಕೊಡಲೆಂದು ಮನವಿ ಪತ್ರ ಹಿಡಿದು ಹೋಗುತ್ತಿದ್ದರು. ಇದನ್ನೂ ಓದಿ: ಬಿಎಸ್‍ವೈ ಅವರಲ್ಲಿ ರಕ್ತ ಎಷ್ಟಿದೆ: ಸಿಎಂ ಪ್ರಶ್ನೆಈ ವೇಳೆ ಅಲ್ಲಿದ್ದಂತಹ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ಇದ್ದರೂ ವಿಕಲಚೇತನರ ಮನವಿಯೇನೆಂದು ಕೇಳಲಿಲ್ಲ. ಅಲ್ಲದೇ ಅವರತ್ತ ತಮ್ಮ ಗಮನವನ್ನೂ ಹರಿಸಿಲ್ಲ. ಇನ್ನು ಪೊಲೀಸರು ಮಾನವೀಯತೆ ಮರೆತವರಂತೆ ಅವರನ್ನು ಎಳೆದು ಹೊರಹಾಕಿದ್ದಾರೆ.https://www.youtube.com/watch?v=0xSkqyPkZZUSign in to your account
Username or Email Address


Password

 Remember Me


