ಕೋಲಾರ: ಲಾರಿ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಬಳಿ ನಡೆದಿದೆ.ಕುಟ್ಟಿ ರವಿ (35), ಗಿರಿ (28) ಹಾಗೂ ವಿನೋದ್ (30) ಮೃತ ದುರ್ದೈವಿಗಳು. ಮೃತರಲ್ಲಿ ಓರ್ವ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಕಾರಿನಲ್ಲಿ  ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿದೆ.ರಜೆ ಇದ್ದ ಕಾರಣ ಮೂವರು ಸ್ನೇಹಿತರು ಕಾರಿನಲ್ಲಿ ಸುತ್ತಾಡಲು ಹೋಗಿದ್ದರು. ಅಲಮನೇರುನಿಂದ ಚಂದ್ರಗಿರಿಗೆ ಹೋಗುತ್ತಿದ್ದರು. ಇನ್ನೊಂದು ದಿಕ್ಕಿನಲ್ಲಿ ಲಾರಿ ಚಂದ್ರಗಿರಿಗೆ ಬರುತ್ತಿತ್ತು. ಈ ವೇಳೆ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ನೇಹಿತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಚಂದ್ರಗಿರಿ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


