ಮಂಗಳೂರು: ದೀಪಕ್ ರಾವ್ ಹತ್ಯೆಯಾದ ಬುಧವಾರದಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ವ್ಯಾಪಾರಿ ಬಶೀರ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು.ಈ ದಾಳಿ ಭಯಾನಕವಾಗಿದ್ದು ಅಂಬುಲೆನ್ಸ್ ಚಾಲಕ ಶೇಖರ್ ಎಂಬುವವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಶೀರ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶೇಖರ್, ರಾತ್ರಿ  ನಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ. ಈ ವೇಳೆ ದಾರಿ ಮಧ್ಯೆ ವ್ಯಕ್ತಿ ಒಬ್ಬರು ಬಿದ್ದಿದ್ದರು. ಅಪಘಾತವಾಗಿ ರಸ್ತೆಗೆ ಬಿದ್ದಿರಬಹುದು ಎಂದು ಭಾವಿಸಿ ಅವರನ್ನು ಅಂಬುಲೆನ್ಸ್ ಹಾಕಿ ಆಸ್ಪತ್ರೆಗೆ ದಾಖಲಿಸಿದೆ. 5, 10 ನಿಮಿಷ ತಡವಾಗಿದ್ದರೂ ಅವರು ಬದುಕಿ ಉಳಿಯುವುದು ಕಷ್ಟವಾಗಿತ್ತು. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳhttps://youtu.be/prf8LAzRcusSign in to your account
Username or Email Address


Password

 Remember Me


