ಮಂಡ್ಯ: ಫೇಸ್ ಬುಕ್‍ನಲ್ಲಿ ದಲಿತ ಸಂಘಟನೆಗಳನ್ನು ಅವಹೇಳನ ಮಾಡುವ ರೀತಿ ಪೋಸ್ಟ್ ಶೇರ್ ಮಾಡಿದ್ದಾರೆ ಎಂದು ರಾಜೇಶ್ ಹಿಂದೂ ಎಂಬ ಹೆಸರಿನ ಖಾತೆಯುಳ್ಳ ವ್ಯಕ್ತಿ ವಿರುದ್ಧ ಹೋರಾಟಗಾರರು ಮಂಡ್ಯದ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ರಾಜೇಶ್ ಹಿಂದೂ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿರುವ ಯುವಕ ಮಂದಾರ್ ಅಭ್ಯಂಕರ್ ಅವರ ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ “ಲೋ ಗಂಜಿ ನನ್ನ ಮಕ್ಕಳ. ನೋಡಿ ನಿಮ್ಮ ಸಂಘಟನೆಯ ಶಕ್ತಿಯನ್ನು. ಥೂ ನಿಮ್ಮ ಜನ್ಮಕ್ಕೆ” ಎಂಬ ರೀತಿ ಬೈದಿದ್ದಾರೆ.ಇದರಿಂದ ರಾಜೇಶ್ ಹಿಂದೂ ವಿರುದ್ಧ ಮದ್ದೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದಲಿತ ಸಂಘಟನೆಗಳನ್ನು ಅವಹೇಳನ ಮಾಡಿದ ರಾಜೇಶ್ ಹಿಂದೂ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಮದ್ದೂರು ಪೊಲೀಸರು ಹೋರಾಟಗಾರರ ಮನವಿ ಸ್ವೀಕರಿಸಿದ್ದು, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.Sign in to your account
Username or Email Address


Password

 Remember Me


