ಬೆಂಗಳೂರು: ಕುಡಿದು ರಾಂಗ್ ರೂಟ್ ನಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದುದನ್ನು ಪ್ರಶ್ನಿಸಿದ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಯಲ್ಲಿ ಕಳೆದ ರಾತ್ರಿ ನಡೆದಿದೆ.ಬಿಎಂಟಿಸಿ ಚಾಲಕನಿಗೆ ಥಳಿಸಿದ ವ್ಯಕ್ತಿಯನ್ನು ನೀನು ಯಾರಪ್ಪ ಅಂತ ಕೇಳಿದರೆ ರಾಮನಗರದ ಬಿಜೆಪಿ ಅಕಾಂಕ್ಷಿ ಬಾಮೈದ ಹರ್ಷ ಎಂದು ದರ್ಪದಿಂದ ಹೇಳುತ್ತಾನೆ. ಹಲ್ಲೆಗೊಳಗಾದ ಬಿಎಂಟಿಸಿ ಚಾಲಕನನ್ನ ಗಿರಿಮಲ್ಲ ಎಂದು ಗುರುತಿಸಲಾಗಿದೆ. ಕುಡಿದು ಮತ್ತಿನಲ್ಲಿ ಹರ್ಷ ಹಲ್ಲೆ ಮಾಡಿದ ನಂತರ ಗೊಟ್ಟಿಗೆರೆ ಟ್ರಾಫಿಕ್ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪೊಲೀಸ್ ಠಾಣೆಯಲ್ಲೂ ದರ್ಪ ತೋರಿದ ಹರ್ಷ, ಪೊಲೀಸರಿಗೆ ನಾನು ಯಾರು ಗೊತ್ತಾ? ರಾಮನಗರದ ಬಿಜೆಪಿ ಶಾಸಕ ಅಕಾಂಕ್ಷಿ ಜಗದೀಶ್ ಗೌಡರ ಬಾಮೈದ ಅಂತ ಅವಾಜ್ ಹಾಕಿದ್ದಾನೆ. ಈ ಎಲ್ಲಾ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.ಪೊಲೀಸ್ ಠಾಣೆಯಲ್ಲಿ ರದ್ದಾಂತ, ಅವಾಚ್ಯ ಶಬ್ದಗಳಿಂದ ನಿಂದನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹರ್ಷ ಹಾಗೂ ಮತ್ತೊಬ್ಬನಾದ ಹುಳಿಮಾವು ಬಿಸಿನೆಸ್ ಮ್ಯಾನ್ ರವಿರೆಡ್ಡಿ ಅವರ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. Sign in to your account
Username or Email Address


Password

 Remember Me


