ಕಾರವಾರ: ಹೆಸ್ಕಾಂ ಮೀಟರ್ ರೀಡರ್ ನ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಗಟೆಬೈಲಿನಲ್ಲಿ ನಡೆದಿದೆ.ಈಶ್ವರ್ ನಾಯ್ಕ ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆಗೊಳಗಾದವರು ಭಟ್ಕಳದ ಪುರಸಭೆ ಅಂಗಡಿ ತೆರವು ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕ ಸಹೋದರನಾಗಿದ್ದು, 4 ಜನರ ಗುಂಪು ಈಶ್ವರ್ ನಾಯ್ಕ ಗೆ ಹಿಂದಿನಿಂದ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.ಈ ವೇಳೆ ಹಲ್ಲೆಕೋರರಿಂದ ತಪ್ಪಿಸಿಕೊಂಡ ಈಶ್ವರ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಈ ಹಿಂದೆ ಇವರ ಸಹೋದರ ರಾಮಚಂದ್ರ ನಾಯ್ಕ ಪುರಸಭೆ ಅಂಗಡಿ ತೆರವು ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಟ್ಕಳದಲ್ಲಿ ಎರಡು ಕೋಮುಗಳ ನಡುವೆ ವಿರಸಕ್ಕೆ ಕಾರಣವಾಗಿತ್ತು.ಈ ಹಿನ್ನಲೆಯಲ್ಲಿ ಹಲ್ಲೆ ಮಾಡಿರುಬಹುದೆಂದು ಈಶ್ವರ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


