ಬೆಂಗಳೂರು: ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಸರ್ಕಾರ ಇದೀಗ ನಟ ವಿಷ್ಣುವರ್ಧನ್ ಓದಿದ ಶಾಲೆಯನ್ನೇ ಮುಚ್ಚಲು ಹೊರಟಿದೆ.ಚಾಮರಾಜಪೇಟೆಯಲ್ಲಿರೋ ಸರ್ಕಾರಿ ಅನುದಾನಿತ ಮಾಡಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಈ ಶಾಲೆಗೆ ಸೇರಬೇಕಾದ್ರೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರಬೇಕಿತ್ತು ಅಥವಾ ರಾಜಕಾರಣಿಗಳ ರೆಕಮೆಂಡ್ ಬೇಕಿತ್ತು.ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಲವು ಬಾರಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಮುಂದಾಗದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2 ತಿಂಗಳ ಹಿಂದೆ ಪ್ರೌಢಶಾಲೆಯನ್ನು ಮುಚ್ಚಿದ್ದ ಸರ್ಕಾರ ಈಗ ಮಕ್ಕಳ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಾಥಮಿಕ ಶಾಲೆಯನ್ನು ಮುಚ್ಚಲು ಮುಂದಾಗಿದೆ ಎನ್ನಲಾಗಿದೆ.Sign in to your account
Username or Email Address


Password

 Remember Me


